ಚಾಲೆಂಜಿಂಗ್ ಸ್ಟಾರ್ 50ನೇ ಸಿನಿಮಾಗೆ ಸಹೋದರನ ನಿರ್ದೇಶನ ! ಬೆಂಗಳೂರು, ಜುಲೈ 01, 2019 (..):ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ಜೊತೆಗೂಡುತ್ತಿದ್ದಾರೆ. ದರ್ಶನ್ 50 ನೇ ಸಿನಿಮಾ ಶಿವನಂದಿ ಆಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಮೈಲುಗಲ್ಲಿನ ಸಿನಿಮಾವನ್ನು ದಿನಕರ್ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಶಿವನಂದಿ ಸಿನಿಮಾಗೂ ದಿನಕರ್ ನಿರ್ದೇಶಕರು ಎನ್ನಲಾಗುತ್ತಿದೆ. ಆದರೆ ಇನ್ನೂ ಸ್ಪಷ್ಟನೆ ಬಂದಿಲ್ಲ.