ದೇರಳಕಟ್ಟೆ ಪಾಗಲ್ ಪ್ರೇಮಿ ಇರಿತ ಪ್ರಕರಣ : ಚಿಕಿತ್ಸೆಗೆ ಸ್ಪಂಧಿಸುತ್ತಿರುವ ಯುವತಿ ದೀಕ್ಷ.. ಮಂಗಳೂರು, ಜೂ.29, 2019 : (.. ) ಪ್ರೇಮದ ಹುಚ್ಚು ಹಿಡಿದ ಯುವಕನೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಇದೀಗ ಚಿಕಿತ್ಸಗೆ ಸ್ಪಂಧಿಸುತ್ತಿದ್ದಾಳೆ. ಶುಕ್ರವಾರ ಸಂಜೆ ದೇರಳಕಟ್ಟೆ ಬಳಿ ನಡೆದ ಈ ಘಟನೆಯಲ್ಲಿ 20 ವರ್ಷದ ದೀಕ್ಷ ಎಂಬ ಯುವತಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಬಳಿಕ ಸಾರ್ವಜನಿಕರ ನೆರವಿನಿಂದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಯುವತಿ ದೀಕ್ಷ, ವೈದ್ಯರ ಚಿಕಿತ್ಸಗೆ ಸ್ಪಂಧಿಸುತ್ತಿರುವುದಾಗಿ ತಿಳಿದು ಬಂದಿದೆ. ಏನಿದು ಘಟನೆ: ಏಕ ಮುಖ ಪ್ರೇಮಿಸುತ್ತಿದ್ದ 22 ವರ್ಷದ ಯುವಕ ಸುಶಾಂತ್ ಎಂಬಾತ, ಯುವತಿ ದೀಕ್ಷಗೆ ಬೆನ್ನುಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ಆಕೆ ಒಪ್ಪದ ಕಾರಣ, ಆಕೆ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದ. ಜತೆಗೆ ತಾನು ಸಹ ಚಾಕುವಿನಿಂದ ಕತ್ತು ಕೊಯ್ದುಕೊಂಡು ಸಾಯಲು ಮುಂದಾಗಿದ್ದ.ಈ ಘಟನೆ ಕಂಡ ದಾರಿ ಹೋಕರು ಅವರನ್ನು ರಕ್ಷಿಸಲು ಮುಂದಾದಾಗ, ಅವರನ್ನು ಚಾಕುವಿನಿಂದ ಬೆದರಿಸಿ ಸುಶಾಂತ್, ಬಳಿಕ ತನ್ನ ಕತ್ತನ್ನು ಚಾಕುವಿನಿಂದ ಇರಿದುಕೊಳ್ಳತೊಡಗಿದ. ಇದನ್ನು ಸ್ಥಳೀಯ ನಿವಾಸಿಯೊಬ್ಬರು ಮನೆ ಮೇಲಿಂದ ವಿಡಿಯೋ ಮಾಡಿದ್ದರು.ಬಳಿಕ ಸುಶಾಂತ್, ಚಾಕುವಿನಿಂದ ಇರಿದುಕೊಂಡು ರಕ್ತಸ್ತ್ರಾವವಾಗಿ ಕೆಳಕ್ಕೆ ಕುಸಿದು ಬಿದ್ದ. ಕೂಡಲೇ ಈ ಮೊದಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಹಾಗೂ ಯುವಕನನ್ನು ಸ್ಥಳೀಯರು ಆಂಬ್ಯೂಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದರು. : , . (22) (20) , .