ವೃತ್ತಿಪರ ಬಾಕ್ಸಿಂಗ್‌’ಗೆ ವಿಜೇಂದರ್ ಸಿಂಗ್ ! ನ್ಯೂಯಾರ್ಕ್‌, ಜೂನ್ 28, 2019 (..): ಬಾಕ್ಸರ್‌ ವಿಜೇಂದರ್‌ ಸಿಂಗ್‌ ಅಮೆರಿಕಾದಲ್ಲಿ ಜು. 13ರಂದು ವೃತ್ತಿಪರ ಬಾಕ್ಸಿಂಗ್‌ ಕೂಟದಲ್ಲಿ ಆಡಲಿದ್ದಾರೆ. ಗಾಯದ ಕಾರಣದಿಂದ ಕಳೆದ ಒಂದು ವರ್ಷದಿಂದ ಯಾವುದೇ ಬಾಕ್ಸಿಂಗ್‌ ಕೂಟದಲ್ಲಿ ಕಾಣಿಸಿಕೊಳ್ಳದ ವಿಜೇಂದರ್‌ ಇದೀಗ ಅಮೆರಿಕದ ವೃತ್ತಿಪರ ಬಾಕ್ಸಿಂಗ್‌ ಕೂಟದ ಮೂಲಕ ಸ್ಪರ್ಧಾ ಕಣಕ್ಕೆ ಇಳಿಯುತ್ತಿದ್ದಾರೆ. 33 ವರ್ಷದ ವಿಜೇಂದರ್‌ ಮೊದಲ ಪಂದ್ಯದಲ್ಲಿ ಅಮೆರಿಕದ ಮೈಕ್‌ ಸ್ನಿಡರ್‌ ಅವರನ್ನು ಎದುರಿಸಲಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಸ್ಪರ್ಧಿಸಿದ ವಿಜೇಂದರ್‌ ಸೋಲು ಕಂಡಿದ್ದರು.