ಸಿಂಗಾಪುರದಿಂದ ಚಿಂಪಾಂಜಿ, ಗುಜರಾತ್ ನಿಂದ ‘ಸಿಂಹ ಜೋಡಿ ‘ ಮೈಸೂರು ಮೃಗಾಲಯಕ್ಕೆ ಆಗಮನ.. ಮೈಸೂರು, ಜೂ.27, 2019 : (.. ) : ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಸಿಂಗಪೂರ ಮೃಗಾಲಯದಿಂದ ಒಂದು ಹೆಣ್ಣು ಚಿಂಪಾಂಜಿ ಹಾಗೂ ಗುಜರಾತ್ ಮೃಗಾಲಯದಿಂದ ಭಾರತೀಯ ಸಿಂಹಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ.ಮೃಗಾಲಯದಲ್ಲಿರುವ ಒಂಟಿ ಪ್ರಾಣಿಗಳ ಜೊತೆಗೂಡಿಸುವಿಕೆ ಹಾಗೂ ಅನುಮೋದಿತ ಪ್ರಾಣಿ ಸಂಗ್ರಹಣಾ ಯೋಜನೆಯನ್ನು ಉತ್ಕೃಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಾಣಿ ವಿನಿನಯ ಕಾರ್ಯಕ್ರಮದಡಿ ಸಿಂಗಪೂರ ಮೃಗಾಲಯದಿಂದ ಒಂದು ಹೆಣ್ಣು ಚಿಂಪಾಂಜಿ ಜೂ. 23 ರಂದು ಮೈಸೂರು ಮೃಗಾಲಯಕ್ಕೆ ಆಗಮಿಸಿದೆ.ಸುಮಾರು 14 ವರ್ಷ ವಯಸ್ಸಿನ ರ್ಹಾ ಎಂಬ ಹೆಸರಿನ ಹೆಣ್ಣು ಚಿಂಪಾಂಜಿ ಸುರಕ್ಷಿತವಾಗಿದ್ದು ಪ್ರಸ್ತುತ ಅದನ್ನು ದಿಗ್ಬಂಧನ ಆವರಣದಲ್ಲಿರಿಸಿ ನಿಗಾವಹಿಸಲಾಗಿದೆ.ಇದಕ್ಕೆ ಬದಲಿಯಾಗಿ ಮೈಸೂರು ಮೃಗಾಲಯದಿಂದ ರಾಣಿ ಎಂಬ ಹೆಸರಿನ ಒಂದು ಹೆಣ್ಣು ಸ್ಲಾತ್ ಕರಡಿಯನ್ನು ಜೂ.26 ರಂದು ಬೆಂಗಳೂರು ವಿಮಾನ ಮಾರ್ಗದ ಮೂಲಕ ಸಿಂಗಪೂರ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಮುಂದುವರೆದು, ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯಡಿ, ಗುಜರಾತಿನ ಸಕ್ಕರ್ಬಾಗ್ ಮೃಗಾಲಯದಿಂದ ಎರಡು ಜೊತೆ ಭಾರತೀಯ ಸಿಂಹ ಜೂ. 26 ರಂದುಮೈಸೊರು ಮೃಗಾಲಯಕ್ಕೆ ಆಗಮಿಸಿದ್ದು, ಅವುಗಳಲ್ಲಿ ಒಂದು ಜೊತೆ ಸಿಂಹಗಳನ್ನು ಬೆಂಗಳೂರಿನ ಬನ್ನೇರುಘಟ್ಟಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.ಮೃಗಾಲಯದ ಪ್ರಾಣಿ ಸಂಗ್ರಹಕ್ಕೆ ಸೇರ್ಪಡೆಗೊಂಡ ಹೆಣ್ಣು ಚಿಂಪಾಂಜಿ ಹಾಗೂ ಒಂದು ಜೊತೆ ಭಾರತೀಯ ಸಿಂಹ ಮೃಗಾಲಯ ವೀಕ್ಷಣೆಗೆಂದು ದೇಶವಿದೇಶಗಳಿಂದ ಬರಲಿರುವ ವೀಕ್ಷಕರನ್ನು ಆಕರ್ಷಿಸಲಿದೆ ಎಂದು ಮೃಗಾಲಯದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. —- , 23/6/2019 . 14 . 26/6/2019 ., , , 26/6/2019 , , . . / & .