‘ಕೈ’ ಪ್ರತಿಭಟನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ- ಮಾಜಿ ಸಿಎಂ ಬಿಎಸ್ ವೈ ಟೀಕೆ. ಬೆಂಗಳೂರು,ಫೆಬ್ರವರಿ,6,2024(..):ಕೇಂದ್ರ ಸರ್ಕಾರದಿಂದ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಧೋರಣೆ ಖಂಡಿಸಿ ನಾಳೆ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ನಡೆ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟೀಕಿಸಿದ್ದಾರೆ. ಭಾರತ ಬ್ರ್ಯಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಪ್ರತಿಭಟನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕೇಂದ್ರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ದೆಹಲಿಗೆ ಹೋಗಿ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು. ಭಾರತ ಬ್ರ್ಯಾಂಡ್ ಅಕ್ಕಿ ಯೋಜನೆ ಮಧ್ಯಮವರ್ಗಕ್ಕೆ ತಲುಪಲಿದೆ. ಪ್ರತಿ ಕೆ.ಜಿ ಅಕ್ಕಿಗೆ 29 ರೂ. ನಿಗದಿ ಮಾಡಲಾಗಿದೆ. ಜನರ ಅನುಕೂಲಕ್ಕಾಗಿ ಕಡಿಮೆ ದರದಲ್ಲಿ ಅಕ್ಕಿ ನೀಡಲಾಗುತ್ತಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಎಸ್ ವೈ ತಿಳಿಸಿದರು. ಸಿಎಂ ಸಿದ್ದರಾಮಯ್ಯ 10 ಕೆ.ಜಿ ಅಕ್ಕಿ ಕೊಡ್ತೀವಿ ಅಂದಿದ್ರು. ಕೇಂದ್ರದ 5 ಕೆಜಿ ಅಕ್ಕಿ ಹೊರತು ಪಡಿಸಿ ಯಾವುದೇ ಅಕ್ಕಿ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಬಿಎಸ್ ವೈ ಆರೋಪಿಸಿದರು. : - – – -