ಮಲಗಿದ್ದ ವೇಳೆ ಹಾಸಿಗೆಗೆ ದೇವರ ದೀಪ ತಗುಲಿ ಅಗ್ನಿ ಆಕಸ್ಮಿಕ: ಬಾಲಕಿ ಸಜೀವದಹನ… ಬೆಳಗಾವಿ,ಜೂ,25,2019(..): ಮಲಗಿದ್ದ ವೇಳೆ ಹಾಸಿಗೆಗೆ ದೇವರ ದೀಪ ಬೆಂಕಿ ತಗುಲಿ ಅಗ್ನಿ ಆಕಸ್ಮಿಕ ಸಂಭವಿಸಿ ಬಾಲಕಿ ಸಜೀವ ದಹನವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಆನಗೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. 8 ವರ್ಷದ ಕಸ್ತೂರಿ ಮೃತಪಟ್ಟ ಬಾಲಕಿ. ಘಟನೆಯಲ್ಲಿ ಮೃತ ಬಾಲಕಿ ಕಸ್ತೂರಿಯ ತಂದೆ ತಾಯಿ ಅಪಾಯದಿಂದ ಪಾರಾಗಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಪೋಷಕರಿಬ್ಬರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಮಲಗಿದ್ದ ವೇಳೆ ಹಾಸಿಗೆಗೆ ದೇವರ ದೀಪದ ಬೆಂಕಿ ತಗುಲಿ ಈ ಘಟನೆ ಸಂಭವಿಸಿದ್ದು ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – – – --