ದೇವೇಗೌಡ ಯೋಗ ಮಾಡುತ್ತಿರುವ ಫೋಟೋಗೆ ತಮಿಳು ನಟ ಸಿದ್ಧಾರ್ಥ ಅಪಹಾಸ್ಯ ಬೆಂಗಳೂರು, ಜೂನ್ 25, 2019 (..): ಮಾಜಿ ಪ್ರಧಾನಿ ಎಚ್​​​​.ಡಿ.ದೇವೇಗೌಡರ ಯೋಗ ಮಾಡುತ್ತಿರುವ ಫೋಟೊಗೆ ತಮಿಳು​ ನಟ ಸಿದ್ದಾರ್ಥ್ ಅಪಹಾಸ್ಯದ ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಟ್ವಿಟ್ಟರ್ ನಲ್ಲಿ ದೇವೇಗೌಡರ ಬೆಡ್​ ಮೇಲೆ ಮಲಗಿ ಯೋಗ ಮಾಡುತ್ತಿರುವ ಫೋಟೊ ಕುರಿತು ಪ್ರತಿಕ್ರಿಯಿಸಿರುವ ಸಿದ್ದಾರ್ಥ್​, ದೇವೇಗೌಡರು ಚಿಕ್ಕವಯಸ್ಸಿನಿಂದಲೇ ಸಾರ್ವಜನಿಕವಾಗಿ ಹೀಗೆ ಮಲಗುತ್ತಿದ್ದರು. ಈಗ ಅದನ್ನು ಯೋಗ ಎಂದು ಕರೆಯುತ್ತಾರೆ ಎಂದು ಅಪಹಾಸ್ಯ ಮಾಡುವ ರೀತಿಯಲ್ಲಿ ಕಮೆಂಟ್​ ಮಾಡಿದ್ದರು. ಇದಕ್ಕೆ ಗೌಡರ ಅಭಿಮಾನಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.