ಯುವಕನ ಟಾರ್ಚರ್ ಗೆ ಬೇಸತ್ತ ನವ ವಿವಾಹಿತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು ಕೊಡಗು:ಜೂ-25:(..) ಯುವಕನ ಕಾಟಕ್ಕೆ ಬೇಸತ್ತು ನವ ವಿವಾಹೆತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿವ್ಯಜ್ಯೋತಿ (19) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಡಿಕೇರಿ ಡೈರಿ ಫಾರ್ಮ್ ನಿವಾಸಿಯಾಗಿದ್ದ ದಿವ್ಯಜ್ಯೋತಿ ಪೋಷಕರಿಗೆ ಹೇಳದೇ ಬ್ರಿಜೇಶ್ ಎಂಬಾತನ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಈ ವಿಷಯ ದಿವ್ಯಜ್ಯೋತಿಗೆ ಪರಿಚಯಸ್ಥನಾಗಿದ್ದ ಪವನ್‌ ಎಂಬಾತನಿಗೆ ತಿಳಿದಿತ್ತು. ಅಲ್ಲದೇ ದಿವ್ಯಜ್ಯೋತಿಗೆ ಟಾರ್ಚರ್ ನೀಡುತ್ತಾ, ಬ್ರಿಜೆಶ್ ಜತೆ ಮದುವೆ ಆಗಲು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದ. ಪವನ್ ಕಾಟಕ್ಕೆ ಬೇಸತ್ತ ದಿವ್ಯಜ್ಯೋತಿ ಅಂತಿಮವಾಗಿ ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಪವನ್‌ ತನಗೆ ಟಾರ್ಚರ್ ನೀಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ದಿವ್ಯಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪವನ್ ಮತ್ತು ರಿಜಿಸ್ಟರ್ ಮದುವೆ ಆಗಿದ್ದ ಬ್ರಿಜೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.