‘ಸೆಂಚುರಿ ಸ್ಟಾರ್ ‘ ಶಿವಣ್ಣಗೆ ಲಂಡನ್ ನಲ್ಲಿ ನಡೆಯಲಿದೆ ಭುಜದ ನೋವಿನ ಶಸ್ತ್ರ ಚಿಕಿತ್ಸೆ… ಬೆಂಗಳೂರು, ಜೂ.24, 2019 : (.. ) ಭುಜದ ನೋವಿಗೆ ತುತ್ತಾಗಿರುವ ಹ್ಯಾಟ್ರಿಕ್ ಹೀರೊ ಶಿವಣ್ಣ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಲಿದ್ದಾರೆ. ಜುಲೈ 10ರಂದು ಲಂಡನ್ ನಲ್ಲಿ ನಟ ಶಿವಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ನಟ ಶಾರುಕ್ ಖಾನ್, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದ ತಜ್ಞ ವೈದ್ಯರ ತಂಡ, ನಟ ಶಿವಣ್ಣಗೂ ಚಿಕಿತ್ಸೆ ನಡೆಸಲಿದೆ ಎಂಬುದು ವಿಶೇಷ.ಶಿವಣ್ಣ ಜನವರಿಯಲ್ಲಿ ಅಮೆರಿಕಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಆಗಿಂದ ಶಿವಣ್ಣ ಅವರಿಗೆ ಭುಜದ ನೋವಿನ ಸಮಸ್ಯೆ ಎದುರಾಗಿತ್ತು. ಚಿಕಿತ್ಸೆಗೆಂದು ಲಂಡನ್ ಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಈ ಬಾರಿ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುವ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.‘ಶಸ್ತ್ರಚಿಕಿತ್ಸೆ ನಡೆದ ಮೊದಲ ಎರಡು ತಿಂಗಳು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು. ಬಳಿಕ ಸೆಪ್ಟೆಂಬರ್‌ನಲ್ಲಿ ಸಣ್ಣಪುಟ್ಟ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸಬಹುದು. ನವೆಂಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ವೈದ್ಯರು ಶಿವಣ್ಣಗೆ ಸೂಚಿಸಿದ್ದಾರೆ. ವೆಬ್ ನಲ್ಲಿ ಶಿವಣ್ಣ : ಶಿವಣ್ಣ ಅವರು ಮುಂದಿನ ವರ್ಷ ಕನ್ನಡದ ಒಂದು ವೆಬ್‌ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಇದರ ನಿರ್ಮಾಣದ ಹೊಣೆಯನ್ನು ಅವರ ಪುತ್ರಿ ಹೊತ್ತುಕೊಂಡಿದ್ದಾರೆ. ವೆಬ್‌ ಸಿರೀಸ್‌ಗಾಗಿ ಕಥೆ, ಚಿತ್ರಕಥೆ ಸಿದ್ಧವಾಗುತ್ತಿದೆ. ಆದರೆ, ಕಥೆ ನಿರ್ದೇಶಕರು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. 10 . . , .