: ಬಾಲಿವುಡ್ ನ ‘ ಡಿಸ್ಕೋ ಡ್ಯಾನ್ಸರ್ ‘ ಮಗ ‘ಬ್ಯಾಡ್ ಬಾಯ್ ‘ ಮೈಸೂರಲ್ಲಿ…! ಮೈಸೂರು, ಜೂ.24, 2019 : ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಪುತ್ರ ನಮಾಶಿ, ಹಿಂದಿ ಸಿನಿಮಾ `ಬ್ಯಾಡ್ ಬಾಯ್ ‘ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಅರಮನೆ ನಗರಿ ಮೈಸೂರಿನಲ್ಲಿ ಬಿರುಸಿನಿಂದ ಸಾಗಿದೆ. ಚಿತ್ರ ನಿರ್ದೇಶಕ ರಾಜ್ಕುಮಾರ್ ಸಂತೋಷಿ ನಿರ್ದೇಶನದ ಬಹುವೆಚ್ಚದ ಈ ಅದ್ದೂರಿ ಸಿನಿಮಾ ಮೈಸೂರಿನ ಸುಸಜ್ಜಿತ ಬಡಾವಣೆ ಎಂದೇ ಹೆಸರು ಪಡೆದಿರುವ ಆರ್.ಟಿ.ನಗರದ ಸುಂದರ ವಾತಾವರಣದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಇದೇ ಮೇ 18 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭಿಸಿದ ತಂಡ ಬಳಿಕ ಮುಂಬೈಗೆ ತೆರಳಬೇಕಾಗಿತ್ತು. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಮೈಸೂರಿನ ಸುಂದರ ವಾತಾವರಣದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸುತ್ತಿದೆ. ಚಿತ್ರ ನಿರ್ಮಾಪಕ ಸಾಜಿದ್ ಖುರೇಷಿ ಪುತ್ರಿ ಅಮ್ರಿನ್ ಸಹ ‘ ಬ್ಯಾಡ್ ಬಾಯ್ ‘ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಪಡೆಯುತ್ತಿದ್ದು, ಇದೊಂದು ರೊಮ್ಯಾನ್ಟಿಕ್ ಕಾಮಿಡಿ ಸಿನಿಮಾ. ಅಂದಕಾಲತ್ತಿಲೈ ಡಿಸ್ಕೋ ಡ್ಯಾನ್ಸ್ ಖ್ಯಾತಿಯ ನಟ ಮಿಥುನ್ ಚಕ್ರವರ್ತಿಗೂ ಮೈಸೂರಿಗೂ ನಂಟಿದೆ. ಮಿಥುನ್ ಒಡೆತನದ ಹೋಟೆಲ್ ಒಂದು ಮೈಸೂರಲ್ಲಿದೆ. ಚಿತ್ರ ಕೃಪೆ : ಲೊಕೇಶ್ ಮೊಸಳೆ ’ ‘ -’ .. . ’ . ’ . , ’ . 18 . ’’ , . 65 . - . . .