ಸಾಲ ಮರುಪಾವತಿಸದ ಹಿನ್ನೆಲೆ: ರೈತನಿಗೆ ಕೋರ್ಟ್ ಮೂಲಕ ನೋಟೀಸ್ ಕೊಟ್ಟ ಬ್ಯಾಂಕ್… ಮಂಡ್ಯ,ಜೂ,22,2019(..): ಕೃಷಿಗೆ ಪಡೆದಿದ್ದ ಸಾಲವನ್ನ ಮರುಪಾವತಿಸದ ಹಿನ್ನೆಲೆ ರೈತನಿಗೆ ಎಸ್ ಬಿಐ ಬ್ಯಾಂಕ್ ಕೋರ್ಟ್ ಮೂಲಕ ನೋಟೀಸ್ ಜಾರಿ ಮಾಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಉಪ್ಪರಕನಹಳ್ಳಿ ಗ್ರಾಮದ ರೈತ ಬಸವೇಗೌಡ ಎಂಬುವವರಿಗೆ ಕೋರ್ಟ್ ನಿಂದ ನೋಟೀಸ್ ನೀಡಲಾಗಿದೆ. ಬಸವೇಗೌಡ ಕೃಷಿಗಾಗಿ ಎಸ್ ಬಿಐ ನಲ್ಲಿ ಸಾಲ ಪಡೆದಿದ್ದರು. ಈ ನಡುವೆ ಸಾಲಮರುಪಾವತಿ ಮಾಡುವಂತೆ ಬ್ಯಾಂಕ್ ಬಸವೇಗೌಡರಿಗೆ ನೋಟೀಸ್ ನೀಡಿತ್ತು. ಆದರೆ ಬಸವೇಗೌಡರು ಸಾಲ ಮರುಪಾವತಿಸಿರಲಿಲ್ಲ. ಈ ಹಿನ್ನೆಲೆ ಎಸ್ ಬಿಐ ಬ್ಯಾಂಕ್ ಕೋರ್ಟ್ ಮೂಲಕ ರೈತ ಬಸವೇಗೌಡರಿಗೆ ನೋಟೀಸ್ ನೀಡಿಸಿದೆ. ಜೂನ್ 25 ರಂದು ಕೋರ್ಟ್ ಗೆ ಹಾಜರಾಗುವಂತೆ ಬಸವೇಗೌಡರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಕೋರ್ಟ್ ನೋಟೀಸ್ ನಿಂದ ಬಸವೇಗೌಡರು ಆತಂಕಗೊಂಡಿದ್ದು, ಬದುಕಲು ಸಹಾಯಮಾಡಿ ಎಂದು ಬಸವೇಗೌಡರ ಪುತ್ರ ಸಿಎಂ ಬಳಿ ಮನವಿ ಮಾಡಿದ್ದಾರೆ. : - – - - – -