ಯಶ್-ರಾಧಿಕಾ ‘ವೈಆರ್’ ಕಂದನಿಗೆ ಅಧಿಕೃತ ನಾಮಕರಣ ನಾಳೆ ಬೆಂಗಳೂರು, ಜೂನ್ 22, 2019 (..): ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಮಗಳು ‘ಬೇಬಿ ವೈಆರ್’ಗೆ ನಾಮಕರಣ ದಿನಾಂಕ ನಿಗದಿಯಾಗಿದೆ. ಈಗ ಜೂನ್ 23 ರಂದು ಯಶ್ ಮತ್ತು ರಾಧಿಕಾ ದಂಪತಿಯ ಪುತ್ರಿ ನಾಮಕರಣ ಸಮಾರಂಭ ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಯಶ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಷಯ ತೃತೀಯ ದಿನದಂದು ಮಗಳ ಮೊದಲ ಫೋಟೋವನ್ನು ಪೋಸ್ಟ್ ಮಾಡಿದ್ದ ರಾಧಿಕಾ ಪಂಡಿತ್ -ಯಶ್, ಇಬ್ಬರ ಹೆಸರಿನ ಮೊದಲ ಅಕ್ಷರ ವೈಆರ್ ಎಂದು ಮಗುವಿಗೆ ಹೆಸರಿಟ್ಟಿದ್ದರು.