50 ದಿನ ಪೂರೈಸಿದ ಗಣೇಶ-ಭಾವನ ಜೋಡಿಯ ’99’ ಬೆಂಗಳೂರು, ಜೂನ್ 21, 2019 (..): ಪ್ರೀತಮ್ ಗುಬ್ಬಿ ನಿರ್ದೇಶನದ ’99’ ಚಿತ್ರ 50 ದಿನ ಪೂರೈಸಿದೆ. ಈ ಹಿಂದೆ ‘ರೋಮಿಯೋ’ ಚಿತ್ರದಲ್ಲಿ ಮೋಡಿ ಮಾಡಿದ್ದ ಗಣೇಶ್-ಭಾವನಾ ಮೆನನ್ ಜೋಡಿ ಈ ಚಿತ್ರದಲ್ಲೂ ಮೋಡಿ ಮಾಡಿದೆ. ಮೇ 1 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ಈ ಸಿನಿಮಾ ಇದೀಗ 50 ದಿನಗಳನ್ನು ಪೂರೈಸಿರುವುದಕ್ಕೆ ಚಿತ್ರತಂಡದವರು ಧನ್ಯವಾದಗಳು ತಿಳಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರವೀಗ ಅಮೇಜಾನ್ ಪ್ರೈಮ್ ನಲ್ಲೂ ನೋಡಲು ಲಭ್ಯವಿದೆ. ತಮಿಳಿನ ’96’ ಚಿತ್ರದ ರಿಮೇಕ್ ಆಗಿರುವ ಈ ಚಿತ್ರವು ಕಳೆದು ಹೋದ ಪ್ರೀತಿಯನ್ನು ಮತ್ತೆ ಹುಡುಕುವ, ಹುಡುಕಿಕೊಂಡು ಬರುವ ಕಥಾನಕವನ್ನು ಒಳಗೊಂಡಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ತೃಷಾ ಕೃಷ್ಣನ್ ಚಿತ್ರದಲ್ಲಿ ನಟಿಸಿದ್ದರು.