ಮೈಸೂರು ಮತ್ತು ಹಾಸನದಲ್ಲಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ… ಮೈಸೂರು/ ಹಾಸನ, ಜೂ,21,2019(..): ಹಾಸನ ಮತ್ತು ಮೈಸೂರಿನಲ್ಲಿ ಎಸಿಬಿ ಅಧಿಕಾರಿಗಳು ಇಂಜಿನಿಯರ್ ಗಳಿಗೆ ಶಾಕ್ ನೀಡಿದ್ದಾರೆ. ಮೈಸೂರಿನ ಗಾಯತ್ರಿ ಪುರಂ ಬಡಾವಣೆಯಲ್ಲಿರುವ ಜಿಲ್ಲಾ ಪಂಚಾಯಿತಿ ಜ್ಯೂನಿಯರ್ ಇಂಜಿನಿಯರ್ ಅರ್ಷದ್ ಪಾಷಾ ನಿವಾಸದ ಮೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಂ ಬೆಳಿಗ್ಗೆ ಜಿ.ಪಂ. ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು ದಾಖಲೆಗಳ ವಶ ಪಡೆದಿದ್ದಾರೆಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ದಾಳಿ ನಡೆದಿದೆ. ಇನ್ನು ಹಾಸನದಲ್ಲಿ ಸಹಾಯಕ ಇಂಜಿನಿಯರ್ ಚೆನ್ನೇಗೌಡ ನಿವಾಸದ ಮೇಲೂ ಎಸಿಬಿ ದಾಳಿಯಾಗಿದೆ. ಎಸಿಬಿ ಡಿವೈಎಸ್ಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಮನೆಯಲ್ಲಿ ಯಾರು ಇಲ್ಲದ ಹಿನ್ನೆಲೆ ಇಂಜಿನಿಯರ್ ಚೆನ್ನಗೌಡ ಅವರಿಗೆ ಅಧಿಕಾರಿಗಳು ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. : - – –