ಮೈತ್ರಿ ಸರ್ಕಾರ ರಚನೆಯಾಗಿದ್ದು ಇವರಿಂದ, ನನ್ನಿಂದಲ್ಲ: ಹೆಚ್. ವಿಶ್ವನಾಥ್ ಮನವೊಲಿಸಲು ಮತ್ತೆ ಯತ್ನಿಸುವೆ ಎಂದ್ರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.. ಬೆಂಗಳೂರು,ಜೂ,20,2019(..): ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಎನ್ನುತ್ತಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರವನ್ನ ನಾನು ಮಾಡಿದ್ದಲ್ಲ. ಸೋನಿಯಾ ಗಾಂಧಿ ,ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಮೈತ್ರಿ ಸರ್ಕಾರ ರಚನೆ ಆಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಸಮ್ಮಿಶ್ರ ಸರ್ಕಾರ ರಚನೆ ಬೇಡ ಎಂದು ಕಾಂಗ್ರೆಸ್ ನಾಯಕರಿಗೆ ಆಗಲೇ ಹೇಳಿದ್ದೆ. ಆದರೆ ಗುಲಾಂನಬಿ ಅಜಾದ್ ನನ್ನ ಕೈ ಹಿಡಿದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದಿದ್ದರು. ನಾನು ಕಾಂಗ್ರೆಸ್ ನಾಯಕರ ಪ್ರಸ್ತಾಪ ತಿರಸ್ಕರಿಸಿದ್ದೆ. ಆದರೆ ಗಾಂಧಿ ,ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಮೈತ್ರಿ ಸರ್ಕಾರ ರಚನೆ ಆಯಿತು ಎಂದರು. ನಾನು ರಾಹುಲ್ ಗಾಂಧಿ ಭೇಟಿ ಮಾಡಿದ ವೇಳೆ ಬಹಿರಂಗ ಹೇಳಿಕೆ ನೀಡದಂತೆ ತಮ್ಮ ಪಕ್ಷದವರಿಗೆ ಸೂಚಿಸಿ ಎಂದು ಮನವಿ ಮಾಡಿದ್ದೇನೆ. ಪಕ್ಷದ ಬಗ್ಗೆ ಮಾತನಾಡದಂತೆ ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದೇನೆ. ಇದನ್ನ ಬಿಟ್ಟು ರಾಹುಲ್ ಗಾಂಧಿ ಬಳಿ ಏನನ್ನು ಮಾತನಾಡಿಲ್ಲ ಎಂದರು. ನಮ್ಮಿಂದ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗಲ್ಲ. ಸರ್ಕಾರಕ್ಕೆ ತೊಂದರೆ ಆಗುವ ಆಗೆ ನಾನು ಮಾತನಾಡಲ್ಲ. ನಮ್ಮ ಪಕ್ಷದವರು ಮಾತನಾಡಲ್ಲ ಎಂದು ಹೆಚ್.ಡಿ ದೇವೇಗೌಡರು ಭರವಸೆ ನೀಡಿದರು. ಹೆಚ್.ವಿಶ್ವನಾಥ್ ಮತ್ತೆ ಮನವೊಲಿಸುವೆ… ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಹೆಚ್.ವಿಶ್ವನಾಥ್ ಅವರನ್ನ ಮತ್ತೆ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವರು ಜೆಡಿಎಸ್ ಪಕ್ಷ ತೊರೆಯಲ್ಲ. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರಲ್ಲ ಎಂದು ಹೇಳುತ್ತಿದ್ದಾರೆ ಅಂತಾ ಸ್ಪಷ್ಟನೆ ನೀಡಿದರು. . , . ’ . . ’ , . ’ . ’ . . . . . . . . , . , . . . . ’ . ’ . 23rd ’ . . : - - -