ಬೈಕ್ ಗೆ ಟೆಂಪೋ ಡಿಕ್ಕಿ: ದಂಪತಿ ಸ್ಥಳದಲ್ಲೇ ದುರ್ಮರಣ… ಚಾಮರಾಜನಗರ,ಜೂ,20,2019(..) ಬೈಕ್ ಗೆ ಟೆಂಪೋ ಡಿಕ್ಕಿಯಾಗಿ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಾಗಲವಾಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಪತಿ ಮಾದೇಶ್ ಹಾಗೂ ಪತ್ನಿ ಮಣಿ ಮೃತಪಟ್ಟವರು. ಬೈಕ್ ನಲ್ಲಿದ್ದ ಮಗು ಅಪಾಯದಿಂದ ಪಾರಾಗಿದೆ. ನಂಜನಗೂಡಿಗೆ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – -- - .