ಸಂಸತ್ತಿನಲ್ಲಿ ಪ್ರಮಾಣ ವಚನ : ಘೋಷಣೆ ಕೂಗಿ ಉರಿಸಿದ ಬಿಜೆಪಿ ಸದಸ್ಯರು.. ನವದೆಹಲಿ, ಜೂ.18, 2019 ( .. ): ಮಂಗಳವಾರ ಸಂಸತ್‌ ನಲ್ಲಿ ಹೈದರಾಬಾದ್‌ನ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಅವರು ಸದಸ್ಯ ಪ್ರಮಾಣ ವಚನ ಸ್ವೀಕರಿಸುವ ವೇಳೆ ಆಡಳಿತಾರೂಢ ಬಿಜೆಪಿ ಸದಸ್ಯರು ‘ಭಾರತ್‌ ಮಾತಾ ಕೀ ಜೈ,’ ‘ವಂದೇ ಮಾತರಂ,’ ಎಂದು ಕೂಗಿದರು. ಸ್ಪೀಕರ್ ಸೂಚನೆಯಂತೆ ಪ್ರಮಾಣ ವಚನ ಸ್ವೀಕರಿಸಲು ಓವೈಸಿ ಅವರು ಸಂಸತ್‌ನಲ್ಲಿ ಸ್ಪೀಕರ್‌ ಅವರ ಮುಂದಿನ ಬಾವಿ ಬಳಿಗೆ ನಡೆದು ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಈ ವೇಳೆ, ಆಡಳಿತ ಪಕ್ಷದ ಸಂಸದರು ‘ಭಾರತ್‌ ಮಾತಾ ಕೀ ಜೈ,’ ‘ವಂದೇ ಮಾತರಂ,’ ಎಂದು ಘೋಷಣೆ ಕೂಗಿದರು. ಆಗ ಓವೈಸಿ ನಗುನಗುತ್ತಲೇ ‘ಕೂಗಿರಿ… ಕೂಗಿರಿ..’ ಎಂದು ಆಂಗಿಕ ಅಭಿನಯದ ಮೂಲಕ ಮತ್ತಷ್ಟು ಉತ್ತೇಜಿಸುತ್ತಲೇ ಮೈಕ್‌ ಬಳಿಗೆ ಬಂದರು.ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಒವೈಸಿ, ಪ್ರಮಾಣ ವಚನ ಪೂರ್ಣಗೊಳಿಸಿದ ನಂತರ ಅವರು ಕೊನೆಯಲ್ಲಿ ‘ಜೈ ಭೀಮ್‌… ಜೈ ಭೀಮ್‌, ತಕ್ಬೀರ್‌, ಅಲ್ಲಾ ಹು ಅಕ್ಬರ್‌, ಜೈ ಹಿಂದ್‌,’ ಎಂದು ಮರು ಘೋಷಣೆ ಕೂಗಿದರು. – : ’ ‘ ’