ಮೈಸೂರು ರೈಲ್ವೆ ನಿಲ್ದಾಣದಲ್ಲಿ ನವೀಕರಣ ಕಾರ್ಯ ಹಿನ್ನೆಲೆ: ಕೆಲ ರೈಲುಗಳ ಸಂಚಾರ ರದ್ದು.. ಮೈಸೂರು,ಜೂ,17,2019(..): ಮೈಸೂರು ರೈಲ್ವೇ ನಿಲ್ದಾಣದ ಪ್ರಾಂಗಣದಲ್ಲಿ ನವೀಕರಣದ ಕೆಲಸ ನಡೆಯುತ್ತಿದ್ದು ಈ ಹಿನ್ನೆಲೆ ಮೈಸೂರಿನಿಂದ ಕೆಲ ರೈಲುಗಳ ಸಂಚಾರವನ್ನ ರದ್ದು ಮಾಡಲಾಗಿದೆ. ಮೈಸೂರು ರೈಲ್ವೇ ನಿಲ್ದಾಣದ ಪ್ರಾಂಗಣದಲ್ಲಿ ನವೀಕರಣದ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು, ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಈ ನವೀಕರಣ ಕೆಲಸವು ಹಗಲಿನ ಸಮಯದಲ್ಲಿ ಭಾರೀ ಯಂತ್ರೋಪಕರಣಗಳನ್ನು ಬಳಸಿಕೊಂಡು ಮಾಡುವಂತಹದಾದ್ದರಿಂದ ಮತ್ತು ಕೆಲವು ನಿರ್ಣಾಯಕ ಹಂತಗಳಲ್ಲಿ ಸಿಗ್ನಲ್ ಗಳನ್ನು ಹಸ್ತಚಾಲಿತವಾಗಿ ಹಲವು ಹಂತಗಳಲ್ಲಿ ನಿರ್ವಹಿಸಬೇಕಾಗುತ್ತದೆ. ಸಧ್ಯಕ್ಕೆ ಮಧ್ಯರಾತ್ರಿಯಿಂದ ಮುಂಜಾನೆ 7 ಗಂಟೆಗಳವರೆಗೆ ದೂರ ಪ್ರಯಾಣದ ರೈಲುಗಳ ಚಲನೆಗೆ ಕನಿಷ್ಠ ಅನಾನುಕೂಲವನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ನೈರುತ್ಯ ರೈಲ್ವೆ, ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ. ರದ್ದಾಗಿರುವ ರೈಲುಗಾಡಿಗಳ ಮಾಹಿತಿ ಇಲ್ಲಿದೆ ನೋಡಿ.. 19.06.2019 ರ ರೈಲು ಸಂಖ್ಯೆ 22681 ಮೈಸೂರು- ಚೆನ್ನೈ ಸೂಪರ್ ಫಾಸ್ಟ್ ಸಾಪ್ತಾಹಿಕ ಎಕ್ಸ್ ಪ್ರೆಸ್ ಸಂಪೂರ್ಣವಾಗಿ ರದ್ದುಗೊಂಡಿದೆ. ಅಂತೆಯೇ 20.06.2019 ರ ರೈಲು ಸಂಖ್ಯೆ 22682 ಚೆನ್ನೈ-ಮೈಸೂರು ಸೂಪರ್ ಫಾಸ್ಟ್ ಸಾಪ್ತಾಹಿಕ ಎಕ್ಸ್ ಪ್ರೆಸ್ ಸಂಪೂರ್ಣವಾಗಿ ರದ್ದುಗೊಂಡಿದೆ. : – - --