ಟೀಂ ಇಂಡಿಯಾಗೆ ಮತ್ತೊಂದು ಅಘಾತ: ಭುವನೇಶ್ವರ್ ಕುಮಾರ್ ಗಾಯಾಳು ! ಲಂಡನ್, ಜೂನ್ 17, 2019 (..): ಶಿಖರ್ ಧವನ್ ನಂತರ ಭಾರತದ ಬೌಲರ್ ಭುವನೇಶ್ವರ್ ಕುಮಾರ್ ಪಂದ್ಯದಿಂದ ಹೊರ ನಡೆದಿದ್ದಾರೆ. ಆಟದ ಮಧ್ಯಯೇ ಭುವನೇಶ್ವರ್ ಕುಮಾರ್ ಮೈದಾನದಿಂದ ಹೊರ ಹೋಗಿದ್ದರು. ಕಾಲು ಜಾರಿ ಬಿದ್ದ ಕಾರಣ ಭುವನೇಶ್ವರ್ ಕುಮಾರ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಅವ್ರಿಗೆ ವಿಶ್ರಾಂತಿ ಅಗತ್ಯವಿದ್ದು, 2-3 ಪಂದ್ಯಗಳಿಗೆ ಭುವನೇಶ್ವರ್ ಕುಮಾರ್ ಅಲಭ್ಯರಾಗಲಿದ್ದಾರೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.