ಸರ್ಕಾರ ಮಣಿಯದಿದ್ರೆ ಯಾವ ತ್ಯಾಗಕ್ಕೂ ಸಿದ್ಧ: ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ‘ಕೈ’ ಶಾಸಕ ಆನಂದ್ ಸಿಂಗ್… ಬಳ್ಳಾರಿ,ಜೂ,17,2019(..): ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ಮಾಡುವ ಬದಲು ಲೀಸ್ ಗೆ ಕೊಡಲಿ. ಲೀಸ್ ಗೆ ನೀಡಲು ನಮ್ಮ ಯಾವುದೇ ಅಭ್ಯಂತರವಿಲ್ಲ. ಸರ್ಕಾರ ಮಣಿಯದಿದ್ರೆ ನಾವು ಯಾವ ತ್ಯಾಗಕ್ಕೂ ಸಿದ್ಧ ಎಂದು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಿಂದಾಲ್ ಗೆ ಭೂಮಿ ಪರಭಾರೆ ವಿಚಾರ ಕುರಿತು ಬಳ್ಳಾರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಆನಂದ್ ಸಿಂಗ್, ನಾವು ಜಿಂದಲ್ ಅಥವಾ ಸರ್ಕಾರದ ವಿರುದ್ದವಲ್ಲ. ಜಿಂದಾಲ್ ಗೆ ಭೂಮಿ ಕೊಡುವ ಸರ್ಕಾರದ ನಿರ್ಧಾರ ತಪ್ಪು ಎಂಬುದೇ ನಮ್ಮ ಅಭಿಪ್ರಾಯ. ನಾವು ನಮ್ಮ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿಲ್ಲ.ಜನರ ಒತ್ತಡದಿಂದ ಹೋರಾಟ ಮಾಡುತ್ತಿದ್ದೇವೆ. ಭೂಮಿಯನ್ನ ಪರಭಾರೆ ಮಾಡಿಕೊಡುವ ಬದಲು ಲೀಸ್ ಗೆ ನೀಡಲಿ. ಇದಕ್ಕೆ ನಮ್ಮ ಅಭ್ಯಂತರವೇನು ಇಲ್ಲ ಎಂದರು. ಹಾಗೆಯೇ ಜಿಂದಾಲ್ ಕಂಪನಿ ಎಷ್ಟು ಯುವಕರಿಗೆ ಉದ್ಯೋಗ ನೀಡಿದೆ. ಎಷ್ಟು ಗ್ರಾಮಗಳನ್ನ ಜಿಂದಾಲ್ ಅಭಿವೃದ್ಧಿ ಪಡಿಸಿದೆ ಎಂಬುದನ್ನ ಸ್ಪಷ್ಟಪಡಿಸಲಿ. ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯದಿದ್ದರೇ ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಕಾಂಗ್ರೆಸ್ ಪಕ್ಷದ ವಿರುದ್ದವೂ ನಡೆದುಕೊಳ್ಳಲು ಸಿದ್ಧರಿದ್ದೇವೆ. ನಮಗೆ ಅನಿಲ್ ಲಾಡ್ ಸಹ ಬೆಂಬಲ ನೀಡಿದ್ದಾರೆ ಎಂದು ಆನಂದ್ ಸಿಂಗ್ ತಮ್ಮ ಪಕ್ಷಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. : - . # # # # # #.