: ರಕ್ತದ ಗುಂಪು ಪರಿವರ್ತನೆಯಲ್ಲಿ ಮಹತ್ವದ ಸಂಶೋಧನೆ…! ಮೈಸೂರು, ಜೂ.17, 2019 : (.. ) : ‘ಎ’ ರಕ್ತದ ಗುಂಪನ್ನು ‘ ಓ’ ನೆಗೆಟಿವ್ ರಕ್ತದ ಗುಂಪಾಗಿ ಪರಿವರ್ತಿಸುವ ಬ್ಯಾಕ್ಟೀರಿಯಾಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. - ರಕ್ತದ ಗುಂಪು ಅಪರೂಪದ್ದು. ಪ್ರಪಂಚದ ಜನಸಂಖ್ಯೆಯ ಶೇ 6.6 ರಷ್ಟು ಜನರಲ್ಲಿ ಮಾತ್ರ ಇದು ಕಂಡು ಬರುತ್ತದೆ. ಆದರೆ ಈ ಗುಂಪಿನ ರಕ್ತಕ್ಕೆ ಶೇ 13 ರಷ್ಟು ಬೇಡಿಕೆಯಿದೆ. ಈ ಸಮಸ್ಯೆಯನ್ನು ಬಗೆ ಹರಿಸಲು ಸಂಶೋಧಕರು ಸಾಮಾನ್ಯವಾಗಿ ಕಂಡು ಬರುವ ‘ ಎ ‘ ಗುಂಪಿನ ರಕ್ತವನ್ನು ‘ ಓ ‘ ನೆಗೆಟಿವ್ ಆಗಿ ಪರಿವರ್ತಿಸುವ ಪ್ರಯತ್ನದಲ್ಲಿ ಭಾಗಶಃ ಯಶಸ್ಸು ಕಂಡಿದ್ದಾರೆ. ಮನುಷ್ಯನ ಕರುಳಿನಲ್ಲಿರುವ ಎರಡು ಕಿಣ್ವಗಳು ಯಾವುದೇ ರಕ್ತದ ಗುಂಪನ್ನು ‘ ಓ’ ನೆಗೆಟಿವ್ ಆಗಿ ಪರಿವರ್ತಿಸುವ ಸಾಮರ್ಥ್ಯವುಳ್ಳವಾಗಿವೆ. ಮನುಷ್ಯನಲ್ಲಿ ಮೂಲತಃ ನಾಲ್ಕು ಬಗೆಯ ರಕ್ತದ ಗುಂಪುಗಳಿವೆ. , , ಮತ್ತು ಎಂದು. ಅದು ಹೊಂದಿರುವ ಪ್ರೋಟಿನ್ ಗಳ ಆಧಾರದ ಮೇಲೆ ಈ ರಕ್ತದ ಗುಂಪುಗಳನ್ನು ಹೆಸರಿಸಲಾಗಿದೆ. ತನ್ನದಲ್ಲದ ಗುಂಪಿನ ರಕ್ತದ ಕಣಗಳನ್ನು ಶತ್ರು ಎಂದು ಭಾವಿಸಿ ಅದನ್ನು ಆಂಟಿಬಾಡಿಗಳು ಕೊಲ್ಲುತ್ತವೆ. ಹಾಗಾಗಿ ರಕ್ತ ಹೆಪ್ಪುಗಟ್ಟಿ, ಬಹು ಅಂಗಾಂಗ ವೈಫಲ್ಯತೆಗೆ ಈಡು ಮಾಡುತ್ತದೆ. ಇತ್ತೀಚಿನ ಸಂಶೋಧನೆಯಲ್ಲಿ ಮಾನವನ ಕರುಳಿನ ಒಳ ಪದರದಲ್ಲಿರುವ ಸಕ್ಕರೆ ಅಂಶವನ್ನು ತೆಗೆದು ಹಾಕುವ ಕಿಣ್ವಗಳು ಪತ್ತೆಯಾಗಿವೆ. ಈ ಕಿಣ್ವಗಳು ಎ ರಕ್ತದ ಕೋಶಗಳಲ್ಲಿರುವ ಪ್ರೋಟಿನ್ / ಸಕ್ಕರೆ ಅಂಶವನ್ನು ತೆಗೆದು ಹಾಕಿ, ಓ ನೆಗೆಟಿವ್ ಆಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿವೆ.ಮುಂಬರುವ ದಿನಗಳಲ್ಲಿ ಸಾವಿರಾರು ಮಂದಿಯ ಜೀವರಕ್ಷಣೆಯಲ್ಲಿ ಈ ಸಂಶೋಧನೆ ಮಹತ್ವದ ಪಾತ್ರವಹಿಸಲಿದೆ ಎಂಬುದು ವಿಜ್ಞಾನಿಗಳ ಆಶಯವಾಗಿದೆ. – ಕೆ.ನಟರಾಜ್ಸಹಾಯಕ ಪ್ರಾಧ್ಯಾಪಕರುಮಹಾರಾಣಿ ವಿಜ್ಞಾನ ಕಾಲೇಜುಮೈಸೂರು. . , . —, , , — . , , , , . , . “” , ’ .