ನೆಟ್ ಪ್ಲಿಕ್ಸ್ ವೆಬ್ ಸರಣಿ ನಿರ್ದೇಶನ ಮಾಡಿದ ಪವನ್ ಕುಮಾರ್ ಬೆಂಗಳೂರು, ಜೂನ್ 17, 2019 (..): ನಿರ್ದೇಶಕ ಪವನ್ ಕುಮಾರ್ ಸದ್ಯಕ್ಕೆ ನಿರ್ದೇಶನ ಬಿಟ್ಟು ನಟನೆಯತ್ತ ತೊಡಗಿಕೊಂಡಿದ್ದಾರೆ. ಕಳೆದ ವರ್ಷ ‘ಗುಳ್ಟು’ ಚಿತ್ರದಲ್ಲಿ ಅಭಿನಯಿಸಿದ್ದ ಅವರೀಗ ‘ಗಾಳಿಪಟ-2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ನಡುವೆ ನೆಟ್ ಪ್ಲಿಕ್ಸ್ ಗಾಗಿ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಪವನ್ ಕುಮಾರ್ ನಿರ್ದೇಶನ ಮಾಡಿರುವ ‘ಲೈಲಾ’ ವೆಬ್ ಸರಣಿಯ ಎರಡು ಸಂಚಿಕೆಗಳು ಹಿಂದಿಯಲ್ಲಿ ನಿರ್ಮಾಣವಾಗಿದ್ದು, ನೆಟ್ ಫ್ಲಿಕ್ ನಲ್ಲಿ ತೆರೆ ಕಂಡಿದೆ. ಈ ಸರಣಿಯು ಆರು ಕಂತುಗಳ ಸೀರೀಸ್ ಆಗಿದ್ದು, ಅದರಲ್ಲಿಎರಡು ಕಂತುಗಳನ್ನು ಬಾಲಿವುಡ್ ನ ನಿರ್ದೇಶಕಿ ದೀಪಾ ಮೆಹ್ತಾ, ಶಂಕರ್ ಹಾಗೂ ಕನ್ನಡದ ನಿರ್ದೇಶಕ ಪವನ್ ಕುಮಾರ್ ನಿರ್ದೇಶಿಸಿದ್ದಾರೆ.