ಡಿಕೆಶಿ ಶ್ರಮದ ಫಲವಾಗಿ ಹೆಚ್ಚು ಶಾಸಕರು ಆಯ್ಕೆ: ಮುಂದೆ ಉನ್ನತ ಸ್ಥಾನ ಸಿಗುತ್ತೆ-ರಂಭಾಪುರಿ ಶ್ರೀ. ವಿಜಯಪುರ,ಫೆಬ್ರವರಿ,3,2024(..):ಡಿಸಿಎಂ ಡಿ.ಕೆ ಶಿವಕುಮಾರ್ ಶ್ರಮದ ಫಲವಾಗಿ ಹೆಚ್ಚು ಶಾಸಕರು ಆಯ್ಕೆಯಾಗಿದ್ದಾರೆ. ಮುಂದೆ ಅವರಿಗೆ ಉನ್ನತ ಸ್ಥಾನ ಸಿಗಲಿದೆ ಎಂದು ರಂಭಾಪುರಿ ಸ್ವಾಮೀಜಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, ಡಿಕೆ ಶಿವಕುಮಾರ್ ಗೆ ಮುಂದೆ ಅತ್ಯುನ್ನತ ಸ್ಥಾನ ಸಿಗಲಿದೆ. ಡಿಕೆ ಶಿವಕುಮಾರ್ ಅನುಭವ ತಿರಸ್ಕಾರ ಮಾಡಲು ಆಗಲ್ಲ. ರಾಜ್ಯದ ಅತ್ಯುನ್ನತ ಹುದ್ದೆ ಅಂದರೆ ಸಿಎಂ ಹುದ್ದೆ. ಈಗಲೇ ಸಿಎಂ ಸ್ಥಾನ ಸಿಗುತ್ತೆ ಎಂದು ಹೇಳಲ್ಲ ಮುಂದೆ ರಾಜ್ಯದ ಚುಕ್ಕಾಣಿ ಹಿಡಿಯುವ ಅರ್ಹತೆ ಅವರಿಗೆ ಸಿಗಲಿದೆ ಎಂದು ನುಡಿದರು. ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿರುವುದು ಸ್ವಾಗತ. ದೇಶದ ಹಿರಿಯ ನಾಯಕನಿಗೆ ಭಾರತ ರತ್ನ ನೀಡಲಾಗಿದೆ. ಬಿಜೆಪಿ ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದಾರೆ. ವಾಜಪೇಯಿ ಮತ್ತು ಎಲ್.ಕೆ ಅಡ್ವಾಣೀ ಹೋರಾಡಿದ್ದಾರೆ. ಹಾಗೆಯೇ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೂ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದರು. : - – – - - .