ಸುದ್ದಿ ವಾಹಿನಿಯ ವರದಿಗಾರನ ಬೆಂಬಲಿಗರಿಂದ ವಿಮ್ಸ್ ಸಿಬ್ಬಂದಿ ಮೇಲೆ ಹಲ್ಲೆ : ಪೊಲೀಸರಿಗೆ ಲಭಿಸಿದ ವಿಡಿಯೋ.. ಬಳ್ಳಾರಿ, ಜೂ.14, 2019 (.. ): ನಗರದ ಸಾಮಾಜಿಕ ಕಾರ್ಯಕರ್ತ ಹಾಗೂ ಸುದ್ದಿ ವಾಹಿನಿಯೊಂದರ ವರದಿಗಾರನ ಬೆಂಬಲಿಗರಿಂದ ರಾತ್ರಿ ವೇಳೆಯಲ್ಲಿ ಕರ್ತವ್ಯನಿರತ ವಿಮ್ಸ್ ಸಿಬ್ಬಂದಿ ಮೇಲೆ ಆಸ್ಪತ್ರೆಯಲ್ಲಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ವಿ.ಕೆ.ಯಾದವಾಡ್ ಹಲ್ಲೆಗೊಳಗಾಗಿರುವ ಸಿನಿಯರ್ ಲ್ಯಾಬ್ ಟೆಕ್ನಿಶಿಯನ್. ಅವರನ್ನು ಗುಂಪೊಂದು ಎಳೆದುತಂದು ಹಲ್ಲೆ ಮಾಡಿದ ವಿಡಿಯೊ ಇದೀಗ ಕೌಲ್ಬಜಾರ್ ಠಾಣೆಯ ಪೊಲೀಸರಿಗೆ ಲಭ್ಯವಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಸಿಬ್ಬಂದಿ ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. – ಕೃಪೆ -ಪ್ರಜಾವಾಣಿ -----