ನಾನು ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ: ಸರ್ಕಾರಕ್ಕೆ ಬೆಂಬಲ ಮತ್ತು ರಮೇಶ್ ಜಾರಕಿಹೊಳಿ ಭೇಟಿ ಕುರಿತು ಪಕ್ಷೇತರ ಶಾಸಕ ನಾಗೇಶ್ ಪ್ರತಿಕ್ರಿಯಿಸಿದ್ದು ಹೀಗೆ… ಬೆಂಗಳೂರು,ಜೂ,14,2019(..): ಇಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟಕ್ಕೆ ಪಕ್ಷೇತರ ಶಾಸಕ ನಾಗೇಶ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಜೆಡಿಎಸ್ ಸೇರ್ಪಡೆ ಕುರಿತು ಶಾಸಕ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಇಂದು ಮಾಧ್ಯಮಗಳ ಜತೆ ಪ್ರತಿಕ್ರಿಯಿಸಿರುವ ಪಕ್ಷೇತರ ಶಾಸಕ ನಾಗೇಶ್ ನಾನು ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ. ಸರ್ಕಾರಕ್ಕೆ ಬೆಂಬಲವಾಗಿ ಇರುತ್ತೇನೆ ಸದ್ಯ ಅನಿವಾರ್ಯ ಪರಿಸ್ಥಿತಿ ಇದೆ. ನಾವು ಬೆಂಬಲಿಸಲೇ ಬೇಕು. ಈ ವೇಳೆ ಚುನಾವಣೆಗೆ ಹೋಗಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಶಾಸಕ ನಾಗೇಶ್, ರಮೇಶ್ ಜಾರಕಿಹೊಳಿ ನಿವಾಸಕ್ಕೆ ಹೋಗಿದ್ದು ನಿಜ. ಅವರನ್ನ ಮನವೊಲಿಸಲು ಹೋಗಿದ್ದವು. ಅವರನ್ನ ನಮ್ಮ ಜತೆ ಬನ್ನಿ ಎಂದು ಮನವೊಲಿಕೆಗೆ ಮುಂದಾದವರಿ. ಅವರು ನಿಮಗೆ ಒಳ್ಳೆಯದಾದ್ರೆ ನೀವು ಹೋಗಿ ಎಂದು ಪ್ರತಿಕ್ರಿಯಿಸಿದರು ಎಂದರು. ಇಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಮೂವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. : - # # # # #