ಯಶ್ ಜತೆ ಸ್ಕ್ರೀನ್ ಶೇರ್ ಕುರಿತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದೇನು ಗೊತ್ತಾ..? ಮೈಸೂರು,ಜೂ,14,2019(..): ಯಶ್ ಜೊತೆ ಒಂದೇ ಸಿನಿಮಾದಲ್ಲಿ ನಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಾಲ ಬಂದಾಗ ಅದು ಆಗುತ್ತೆ. ಇಬ್ಬರೂ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ಭೇಟಿಯಾಗಿ ಊಟ ಮಾಡಿದ್ದೇವೆ ಅಷ್ಟೆ ಎಂದರು. ಮೈಸೂರಿನ ರಾಮಕೃಷ್ಣ ನಗರದಲ್ಲಿನ ಪರಮಹಂಸ ಉದ್ಯಾನವನದಲ್ಲಿ ನಿರ್ಮಾಣವಾಗಿರುವ ಔಟ್ ಡೋರ್ ಜಿಮ್‌ ಅನ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಉದ್ಘಾಟಿಸಿದರು. ನಟ ಪುನಿತ್‌ಗೆ ಬೃಹತ್ ಗುಲಾಬಿ ಹೂವಿನ ಹಾರ ಹಾಕಿ ಅಭಿಮಾನಿಗಳು ಸುಂತೋಷ ಪಟ್ಟರು. ಇದೇ ವೇಳೆ ಪುನೀತ್ ರಾಜ್ ಕುಮಾರ್ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಉದ್ಘಾಟನೆ ಬಳಿಕ ಮಾತನಾಡಿದ ನಟ ಪುನೀತ್ ರಾಜ್ ಕುಮಾರ್, ರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ಮೈಸೂರಿನಲ್ಲಿ ಉದ್ಯಾನವನ ನಿರ್ಮಾಣವಾಗಿದೆ. ಅಲ್ಲಿ ಸುಸಜ್ಜಿತ ವ್ಯಾಯಾಮ ಶಾಖೆ ನಿರ್ಮಾಣ ಉತ್ತಮವಾಗಿದೆ. ಮನುಷ್ಯರಿಗೆ ವ್ಯಾಯಾಮ ಅವಶ್ಯಕವಾದುದು. ಅಂತರ ರಾಷ್ಟ್ರೀಯ ಯೋಗ ದಿನಕ್ಕೆ ಸಜ್ಜಾಗುತ್ತಿರುವ ಮೈಸೂರಿಗರಿಗೆ ಆಲ್ ದಿ ಬೆಸ್ಟ್ ಎಂದು ಶುಭಕೋರಿದರು. ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರ. ಸಂಬಂಧ. ಇಂತಹ ವಿಚಾರದಲ್ಲಿ ಕನ್ನಡ ಚಿತ್ರರಂಗ ಸದಾ ಜೊತೆಯಾಗಿರುತ್ತೆ ಎಂದು ನಟ ಪುನಿತ್ ರಾಜ್‌ಕುಮಾರ್ ಭರವಸೆ ನೀಡಿದರು. : . # # # # #.