‘ ಅದನ್ನು ಮಾಧ್ಯಮದ ಮುಂದೆ ಹೇಳ್ತಿಯಾ..? ಹೋಗಿ ಎಸ್‌ಐಟಿ ಮುಂದೆ ಹೇಳಪ್ಪ’ : ರೋಷಾಗ್ನಿಗೆ ತುಪ್ಪ ಸುರಿದ ಸಿದ್ದು. ಮೈಸೂರು, ಜೂ.13, 2019 : (.. ) ಐಎಂಎ ವಿಚಾರದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂಬ ರೋಷನ್ ಬೇಗ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.‘ ಅದನ್ನು ಮಾಧ್ಯಮದ ಮುಂದೆ ಹೇಳ್ತಿಯಾ..? ಹೋಗಿ ಎಸ್‌ಐಟಿ ಮುಂದೆ ಹೇಳಪ್ಪ’ ಎಂದು ಮೈಸೂರಿನಲ್ಲಿ ಮಾಧ್ಯಮದವರಿಗೆ ಹೇಳುವ ಮೂಲಕ ರೋಷನ್ ಬೇಗ್‌ಗೆ ತಿರುಗೇಟು ಕೊಟ್ಟರು.ಐಎಂಎ ವಿಚಾರದಲ್ಲಿ ಎಸ್.ಐ.ಟಿ ರಚನೆ ಆಗಿದೆ. ಎಸ್.ಐ.ಟಿ ಸಂಪೂರ್ಣವಾಗಿ ತನಿಖೆ ನಡೆಸಲಿದೆ. ಆ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡೋಲ್ಲ‌..ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ..ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಿದ್ದು ಪ್ರತಿಕ್ರಿಯೆಗೆ ನಕಾರ. ಸಚಿವ ಸಂಪುಟ ವಿಸ್ತರಣೆ ಮಾಡಿಕೊಳ್ಳುತ್ತಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಲೆ ಹೊರಟ ಸಿದ್ದರಾಮಯ್ಯ. : ------