ಸಿಸಿಟಿವಿಯಲ್ಲಿ ರೆಕಾರ್ಡ್ ಆಯ್ತು ದಕ್ಷಿಣಕಾಶಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತ… ಮೈಸೂರು, ಜೂ.13, 2019 : (.. ) ನಂಜನಗೂಡಿನಲ್ಲಿ ಭೀಕರ ರಸ್ತೆ ಅಪಘಾತವೊಂದುಸಿಸಿ ಕ್ಯಾಮರಾಮದಲ್ಲಿ ಸೆರೆಯಾಗಿದೆ.ರಾಷ್ಟ್ರೀಯ ಹೆದ್ದಾರಿ 766ನಲ್ಲಿ ಅತಿವೇಗವಾಗಿ ಬಂದ ಕಾರೊಂದು, ಬೈಕ್ ಮತ್ತು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಪತ್ರಿಕಾ ಛಾಯಾಗ್ರಾಹಕ ಅನಂತಕೃಷ್ಣ ಸಿಂಗ್ ಗಂಭೀರ ಗಾಯಗೊಂಡರು. ಅದೃಷ್ಠವಶಾತ್, ಪ್ರಾಣಾಪಾಯದಿಂದ ಬೈಕ್ ಸವಾರರ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ನಂಜನಗೂಡು ಪಟ್ಟಣದ ಪೊಲೀಸ್ ವಸತಿಗೃಹ ಎದುರು ಇತ್ತೀಚೆಗೆ ನಡೆದಿದ್ದ ಘಟನೆ. ಈ ಘಟನೆಗೆ ಸಂಭಂಧಿಸಿದಂತೆ ಕೇರಳ ಮೂಲದ ವ್ಯಕ್ತಿ ಹಾಗೂ ಆತನ ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋಗಾಗಿ ಇಲ್ಲಿ ನೋಡಿ… : -----