ಆಗಷ್ಟೇ ಜನಿಸಿದ ಮಗು ಮೋರಿಗೆ: ಅನೈತಿಕ ಸಂಬಂಧಕ್ಕೆ ಬಲಿಯಾಯ್ತೇ ಹಸುಗೂಸು..? ಮೈಸೂರು,ಜೂ,12,2019(..): ಆಗಷ್ಟೇ ಜನಿಸಿದ ಮಗವನ್ನ ಮೋರಿಗೆ ಬಿಸಾಡಿದ ವಿಲಕ್ಷಣ ಘಟನೆಯೊಂದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಕೆಂಚನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಗಷ್ಟೆ ಜನಿಸಿದ ಹಸುಗೂಸನ್ನ ಯಾರೋ ಮೋರಿಗೆಸೆದು ಅಲ್ಲಿಂದ ತೆರಳಿದ್ದಾರೆ. ಹಸುಗೂಸು ಸಾವನ್ನಪ್ಪಿದ್ದು ಸ್ಥಳಕ್ಕೆ ಬೀಚನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮಸಂಬಂಧದಲ್ಲಿ ಮಗು ಜನಿಸಿರುವ ಶಂಕೆ ವ್ಯಕ್ತವಾಗಿದ್ದು ಹೀಗಾಗಿ ಮಗುವನ್ನ ಮೋರಿಗೆ ಬಿಸಾಡಿ ಹೋಗಿದ್ದಾರೆ ಎಂಬ ಅನುಮಾನ ಮೂಡಿದೆ. ಅನೈತಿಕ ಸಂಬಂಧಕ್ಕೆ ಹಸುಗೂಸು ಬಲಿಯಾಯ್ತೆ ಎಂಬ ಶಂಕೆ ವ್ಯಕ್ತವಾಗಿದೆ. : . # # # # .