ಕನ್ನಡಿಗರ ಹೆಮ್ಮೆ : ‘ ಜಾಣಸುದ್ದಿ’ ಜಾಗತಿಕ ವಿಜ್ಞಾನ ಲೋಕವನ್ನು ಪ್ರವೇಶಿಸಿ ಸುದ್ದಿ ಮಾಡಿದೆ. ಮೈಸೂರು, ಜೂ.12, 2019 : (.. ) : ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಯಾದ ‘ ನೇಚರ್ ‘ ನಲ್ಲಿ ಕನ್ನಡದ ವಿಜ್ಞಾನ ಲೇಖನ ಹಾಗೂ ವಿವರಣೆಯನ್ನೊಳಗೊಂಡ `ಜಾಣಸುದ್ಧಿ ‘ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ವಿಶೇಷ ಲೇಖಣ ಪ್ರಕಟಿಸಲಾಗಿದೆ. ಮೈಸೂರಿನ ಸಿಎಫ್ ಟಿಆರ್ ಐ ನ ಹಿರಿಯ ವಿಜ್ಞಾನಿ ಕೊಳ್ಳೇಗಾಲ ಶರ್ಮ ಅವರ ಕನಸಿನ ಕೂಸು ಜಾಣಸುದ್ಧಿ. ಕನ್ನಡದಲ್ಲಿ ವಿಜ್ಞಾನ ವಿವರಣೆಗಳನ್ನು ಒಳಗೊಂಡ ಆಡಿಯೋ ಸಂದೇಶವನ್ನು ವಾಟ್ಸ್ ಅಪ್ ಗ್ರೂಪ್ ಮೂಲಕ ಪ್ರತಿ ವಾರ ಬಿತ್ತರಿಸಲಾಗುತ್ತಿದೆ. 2017 ರ ಸೆಪ್ಟೆಂಬರ್ ನಲ್ಲಿ ಆರಂಭಗೊಂಡ ಈ ಜಾಣಸುದ್ಧಿಗೆ ಕೇಳುಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡು ಶರ್ಮಾ ಅವರ ಪ್ರಯತ್ನಕ್ಕೆ ಸಾಥ್ ನೀಡಿದರು. ಇದೀಗ ಸ್ಥಳೀಯ ಭಾಷೆಯಲ್ಲಿ ಅಂದ್ರೆ ಇಂಗ್ಲಿಷ್ ಹೊರತು ಪಡಿಸಿ ಇತರೆ ಪ್ರಾಂತೀಯ ಭಾಷೆಗಳಲ್ಲಿ ವಿಜ್ಞಾನವನ್ನು ಬೋಧಿಸುವುದು ಆ ಮೂಲಕ ಆಸಕ್ತಿ ಮೂಡಿಸುವ ಪ್ರಯತ್ನಕ್ಕೆ ನೇಚರ್ ಮೆಚ್ಚುಗೆ ವ್ಯಕ್ತಪಡಿಸಿದೆ. ಕನ್ನಡದಲ್ಲಿ ಕಾರ್ಯಕ್ರಮ ನಡೆಸುತ್ತಿರುವ ಬಗೆಗೆ ಲೇಖನ ಪ್ರಕಟಿಸುವ ಮೂಲಕ ವಿಜ್ಞಾನ ಲೇಖಕ, ವಿಜ್ಞಾನಿ ಕೊಳ್ಳೇಗಾಲ ಶರ್ಮಾ ಅವರ ಬೆನ್ನು ತಟ್ಟಿದೆ. ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಸಿಎಫ್ ಟಿಆರ್ ಐ ವಿಜ್ಞಾನಿ ಕೊಳ್ಳೇಗಾಲ ಶರ್ಮಾ, ಜಾಣಸುದ್ಧಿ ಈ ತನಕ 92 ವಾರಗಳ ನಿರಂತರ ಪ್ರಸಾರ ಕಂಡಿದೆ. ಇದು ವಾಟ್ಸ್ ಅಪ್ ಮೂಲಕ ನೇರವಾಗಿ 1 ಸಾವಿರ ಮಂದಿ ಕೇಳುಗರನ್ನು ತಲುಪತ್ತದೆ. ಜತೆಗೆ 2 ಕಮ್ಯೂನಿಟಿ ರೇಡಿಯೋ ಮೂಲಕವೂ ಬಿತ್ತರವಾಗುತ್ತದೆ. ನಮ್ಮ ಈ ಪ್ರಯತ್ನದ ಬಗ್ಗೆ ಅಮೇರಿಕಾದಲ್ಲಿರುವ ಕನ್ನಡಿಗರೊಬ್ಬರು ಮಾಹಿತಿ ಪಡೆದು ಅದನ್ನು ಅಲ್ಲಿನ ‘ ‘ ಗುಂಪಿನ ಗಮನಕ್ಕೆ ತಂದರು. ಅವರಿಂದ ಜಾಣಸುದ್ಧಿ ‘ ನೇಚರ್ ‘ ಪತ್ರಿಕೆಯವರಿಗೆ ತಲುಪಿ ಈ ಬಗ್ಗೆ ವರದಿ ಪ್ರಕಟವಾಗುವಂತಾಯ್ತು ಎಂದರು. , ’ , () , , ( ), , 2017. 20- , , , . - — 1,000, 20 . ’ .