ಲೋಕಸಭೆ ಚುನಾವಣೆ: ಕಾಂಗ್ರೆಸ್ ಗೆ ಸವಾಲೆಸೆದ ಮಮತಾ ಬ್ಯಾನರ್ಜಿ. ಕೋಲ್ಕತ್ತಾ,ಫೆಬ್ರವರಿ,3,2024(..):ಲೋಕಸಭೆ ಚುನಾವಣೆಯಲ್ಲಿ ಹಿಂದಿ ಭಾಷಿಗ ರಾಜ್ಯದಲ್ಲಿ ಬಿಜೆಪಿ ಎದುರಿಸಿ ತೋರಿಸಲಿ ಎಂದು ಕಾಂಗ್ರೆಸ್ ಗೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ. ಇಂದು ಮಾತನಾಡಿದ ಮಮತಾ ಬ್ಯಾನರ್ಜಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸೀಟು ಗೆಲ್ಲುವುದು ಅನುಮಾನ. ಹಿಂದಿ ಭಾಷಿಕರ ರಾಜ್ಯದಲ್ಲಿ ಬಿಜೆಪಿ ಎದುರಿಸಿ ತೋರಿಸಲಿ ಎಂದರು. ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ದವಿದ್ದೆ. ಚುನಾವಣೆಯಲ್ಲಿ 300 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕೆಂದಿದೆ. ತಮ್ಮ ಆಫರ್ ಅನ್ನು ಕಾಂಗ್ರೆಸ್ ತಿರಸ್ಕರಿಸಿದೆ ಎಂದರು. ಇಂಡಿಯಾ ಮೈತ್ರಿಕೂಟದಿಂದ ಟಿಎಂಸಿ ಹೊರ ಬಂದಿದ್ದು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಈಗಾಗಲೇ ತಿಳಿಸಿದ್ದಾರೆ. : -- –-