ರಾಜಕಾರಣಕ್ಕಾಗಿ ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಕೊಟ್ಟಿದ್ರೆ ಅದು ತಪ್ಪಾಗುತ್ತೆ-ಸಚಿವ ಮಧು ಬಂಗಾರಪ್ಪ. ಶಿವಮೊಗ್ಗ,ಫೆಬ್ರವರಿ,3,2024(..):ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜಕಾರಣಕ್ಕಾಗಿ ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಕೊಟ್ಟಿದ್ರೆ ತಪ್ಪಾಗುತ್ತೆ. ಅರ್ಹತೆ ಇದ್ದರವರಿಗೆ ಕೊಡಬೇಕು. ನಾನು ಜಾಸ್ತಿ ಮಾತನಾಡಲ್ಲ ಎಂದರು. ಎಲ್ ಕೆ ಅಡ್ವಾಣಿ ಅವರ ಬಗ್ಗೆ ತುಂಬಾ ಗೌರವವಿದೆ. ಅವರ ಸಿದ್ದಾಂತ ಮತ್ತು ಈಗಿನವರ ಸಿದ್ದಾಂತಕ್ಕೆ ವ್ಯತ್ಯಾಸವಿದೆ. ನಾವು ಸಿದ್ದಗಂಗ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಿ ಎಂದು ಒತ್ತಾಯಿಸಿದ್ದೇವು. ಆದರೆ ಕೇಂದ್ರ ಸರ್ಕಾರ ನೋಡ್ತೇವೆ ಅಂತಾನೂ ಬಾಯಿ ಬಿಟ್ಟಿಲ್ಲ.ಈ ತರಹ ವಿಚಾರವನ್ನ ಚುನಾವಣೆ ಸಂದರ್ಭದಲ್ಲಿ ಹೇಳುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. : – - – - .