ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮೀಜಿಗಳಿಗೂ ಭಾರತ ರತ್ನ ನೀಡಿ-ಡಿಸಿಎಂ ಡಿ.ಕೆ ಶಿವಕುಮಾರ್ ಆಗ್ರಹ. ವಿಜಯಪುರ,ಫೆಬ್ರವರಿ,3,2024(..):ಬಿಜೆಪಿ ಹಿರಿಯ ನಾಯಕ , ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮೀಜಿಗಳಿಗೂ ಭಾರತ ರತ್ನ ನೀಡಿ ಎಂದು ಆಗ್ರಹಿಸಿದ್ದಾರೆ. ಎಲ್​​ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಅಡ್ವಾಣಿಯವರು ದೇಶದ ಹಿರಿಯ ರಾಜಕಾರಣಿ. ಅವರಿಗೆ ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರೇನೂ ಇಲ್ಲ.ಕೇಂದ್ರ ಸರ್ಕಾರದ ತೀರ್ಮಾನಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ನಡೆದಾಡುವ ದೇವರೆಂದೇ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ, ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರಿಗೂ ಮರಣೋತ್ತರವಾಗಿ ಭಾರತ ರತ್ನ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಈ ಹಿಂದೆಯೇ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಮ್ಮ ಸರ್ಕಾರ ಮನವಿ ಮಾಡಿತ್ತು. ಅದು ಅವರಿಗೆ ಬಿಟ್ಟ ವಿಚಾರ. ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಶ್ರೀಗಳು ಹೆಸರಾಗಿದ್ದವರು. ಅವರಿಗೆ ಗೌರವ ಸಲ್ಲಿಸಬೇಕು ಅನ್ನೋದು ನಮ್ಮ ಒತ್ತಾಸೆ ಎಂದು ಶಿವಕುಮಾರ್ ಹೇಳಿದರು. : – – - -.