ಮತ್ತೆ ನಗಿಸಲು ಬರುತ್ತಿದ್ದಾರೆ ಝೀ ಕನ್ನಡದ ಕಾಮಿಡಿ ಕಿಲಾಡಿಗಳು ! ಬೆಂಗಳೂರು, ಜೂನ್ 11, 2019 (..): ಜೀ ಕನ್ನಡ ವಾಹಿನಿಯ ಕಾಮಿಡಿ ಶೋ ‘ಕಾಮಿಡಿ ಕಿಲಾಡಿಗಳು’ ಮತ್ತೆ ಬರುತ್ತಿದೆ. ಎರಡು ಸೀಸನ್ ಗಳ ಬಳಿಕ ಈಗ ವೀಕ್ಷಕರನ್ನು ನಗಿಸಲು ‘ಕಾಮಿಡಿ ಕಿಲಾಡಿಗಳು 3’ ರೆಡಿಯಾಗಿದೆ. ಸದ್ಯಕ್ಕೆ, ಒಂದು ಸಣ್ಣ ಪ್ರೊಮೋ ಮೂಲಕ ಜೀ ಕನ್ನಡ ವಾಹಿನಿ ಕಾರ್ಯಕ್ರಮದ ಬರುವಿಕೆಯನ್ನು ತಿಳಿಸಿದೆ. ಹಳೆಯ ಸೀಸನ್ ನ ಪ್ರಮುಖ ಸ್ಪರ್ಧಿಗಳನ್ನು ಸೇರಿಸಿ ಈ ವಿಡಿಯೋ ಮಾಡಲಾಗಿದೆ. ಶೀಘ್ರದಲ್ಲೇ ಆಡಿಷನ್ ಶುರು ಆಗಲಿದ್ದು, ದಿನಾಂಕದ ಘೋಷಣೆ ಇನ್ನು ಆಗಿಲ್ಲ. ಈ ಬಾರಿಯೂ ಕಾರ್ಯಕ್ರಮದ ತೀರ್ಪುಗಾರರಾಗಿ ನಟ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟಿ ರಕ್ಷಿತಾ ಪ್ರೇಮ್ ಅವರೇ ಮುಂದುವರೆಯುವ ಸಾಧ್ಯತೆ ಇದೆ. ಮಾಸ್ಟರ್ ಆನಂದ್ ಅವರೇ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.