ಕಿಟಕಿಗೆ ಅಪ್ಪಳಿಸಿ ಹೊಡೆದ ಪಿಂಚ್ ! ವೀಡಿಯೋ ಆಯ್ತು ವೈರಲ್ ಲಂಡನ್, ಜೂನ್ 11, 2019 (..): ಭಾನುವಾರ ನಡೆದ ಐಸಿಸಿ ವಿಶ್ವಕಪ್ ನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 36 ರನ್ ಗಳಿಂದ ಸೋಲು ಕಂಡಿದೆ. ಪಂದ್ಯದ ವೇಳೆ ಫಿಂಚ್ ವೀಡಿಯೋವೊಂದು ವೈರಲ್ ಆಗಿದೆ. ಸೋಲಿನ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ತನ್ನ ತಂಡಕ್ಕೆ ನಾಯಕ ಫಿಂಚ್ ನೆರವಾಗಲು ಯತ್ನಿಸುತ್ತಿದ್ದಾಗಾಲೇ ರನ್ ಔಟ್ ಗೆ ಬಲಿಯಾಗಿ ಪೆವಿಲಿಯನ್ ಗೆ ನಡೆದಿದ್ದರು. ನಿರ್ಣಾಯಕ ಹಂತದಲ್ಲಿ ಔಟ್ ಆದ ಫಿಂಚ್ ಹತಾಶರಾಗಿ ಡ್ರೆಸಿಂಗ್ ರೂಮ್ ನಲ್ಲಿ ಕಿಟಕಿಗೆ ಅಪ್ಪಳಿಸಿ ಹೊಡೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗತೊಡಗಿದೆ.