ತಮಿಳು ಸಿನಿಮಾದ ಕಾಮೆಡಿಯನ್ ‘ ಕ್ರೇಜಿ’ ಮೋಹನ್ ನಿಧನ ಚೆನ್ನೈ, ಜೂ.10, 2019 : (.. ) : ತಮಿಳು ಹಾಸ್ಯ ನಟ, ಚಿತ್ರಕಥೆಗಾರ 67 ವರ್ಷದ ಕ್ರೇಜಿ ಮೋಹನ್, ಹೃದಯಘಾತದಿಂದ ಮೃತಪಟ್ಟರು. ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಮೋಹನ್, ಹೃದಯಘಾತದಿಂದ ಮೃತಪಟ್ಟರು ಎಂದು ಇಂದು ಮಧ್ಯಾಹ್ನ ವೈದ್ಯರು ಪ್ರಕಟಿಸಿದರು. ತಮಿಳಿನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್, ರಂಗಭೂಮಿ ಹಿನ್ನೆಲೆಯವರು. ನಟನೆ ಮಾತ್ರವಲ್ಲದೆ ಸಂಭಾಷಣೆ, ಚಿತ್ರಕಥೆ ರಚನೆಯಲ್ಲೂ ಎತ್ತಿದ ಕೈ. ಇವರ ಮೂಲ ಹೆಸರು ಮೋಹನ್ ರಂಗಾಚಾರಿ. ಆದರೆ `ಕ್ರೇಜಿ ಥೀವ್ಸ್ ಇನ್ ಪಾಲವಕ್ಕಂ’ ನಾಟಕದಲ್ಲಿ ಮೋಹನ್ ಜನಪ್ರಿಯತೆ ಪಡೆದ ಮೇಲೆ ಅವರ ಹೆಸರಿನ ಹಿಂದೆ ಕ್ರೇಜಿ ಸೇರಿಕೊಂಡಿತು.——— ’ , , , , 2 .., . 67. 1952, , ‘’ ‘ ’ . .. , .