ಜನಪರ ಕೆಲಸ ಮಾಡಲು ಆಗದಿದ್ರೆ ರಾಜೀನಾಮೆ ಕೊಡಲಿ-ಸಚಿವ ಡಿಸಿ ತಮ್ಮಣ್ಣಗೆ ಸಂಸದ ಸುಮಲತಾ ಅಂಬರೀಶ್ ಟಾಂಗ್.. ಬೆಂಗಳೂರು,ಜೂ,8,2019(..): ಸಮಸ್ಯೆ ಹೇಳಿಕೊಳ್ಳಲು ಬಂದ ಜನರನ್ನು ತರಾಟೆ ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಸಂಸದ ಸುಮಲತಾ ಅಂಬರೀಶ್, ಜನರ ವಿರುದ್ದ ಆ ರೀತಿ ಹೇಳಿದ್ದು ತಪ್ಪು.ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬೇಜಾರಾಗಿದ್ರೆ ರಾಜೀನಾಮೆ ಕೊಡಿ, ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಟಾಂಗ್ ನೀಡಿದರು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಕಾಮಗಾರಿಯ ಶಂಕು ಸ್ಥಾಪನೆ ವೇಳೆ ಡಿ.ಸಿ. ತಮ್ಮಣ್ಣ ಗ್ರಾಮಸ್ಥರ ವಿರುದ್ದ ಗರಂ ಆಗಿದ್ದರು. ಚರಂಡಿ, ಸಮರ್ಪಕ ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಲು ಗ್ರಾಮಸ್ಥರು ಮುಂದಾದಾಗ, ಅಭಿವೃದ್ದಿಗೆ ನಾವು ಬೇಕು. ಮತ ಹಾಕಲು ಅವರು ಬೇಕಾ ಎಂದು ಕಿಡಿಕಾರಿದ್ದರು. ಜೆಡಿಎಸ್ ಗೆ ಮತ ಹಾಕದ ಹಿನ್ನೆಲೆ ಈ ರೀತಿ ಹೇಳಿಕೆ ನೀಡಿದ್ದರು. : ’ -