ಅಮೇರಿಕಾದಲ್ಲಿ ರಸ್ತೆ ಅಪಘಾತ: ಬೀದರ್ ಮೂಲದ ತಂದೆ ಮಗು ಸ್ಥಳದಲ್ಲೇ ಸಾವು.. ಬೆಂಗಳೂರು,ಜೂ,8,2019(..): ಅಮೇರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ತಂದೆ ಮತ್ತು ಮಗು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಬೀದರ್ ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಟೆಕ್ಕಿ ಮುಖೇಶ್ ಶಿವಾಜಿವಾರ ದೇಶಮುಖ(27) ಮತ್ತು 2 ವರ್ಷದ ಮಗು ದಿವಿಜಾ ಮೃತಪಟ್ಟವರು. ಪತ್ನಿ ಮೋನಿಕಾ ದೇಶಮುಖಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಹುಟ್ಟುಹಬ್ಬ ಆಚರಿಸಲು ಮುಖೇಶ್ ಪತ್ನಿ ಮೋನಿಕಾ ದೇಶಮುಖ ಮತ್ತು ಮಗುವಿನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ಟ್ಯಾಂಕರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ, ಪರಿಣಾಮ ತಂದೆ-ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. : . . # # # # #