ಗಾಯಗೊಂಡಿದ್ದ ಹಾವಿನ ಮರಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಸ್ನೇಕ್ ಕೆಂಪರಾಜು… ಮೈಸೂರು,ಜೂ,8,2019(..): ರಸ್ತೆಯಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ಹಾವಿನ ಮರಿಗೆ ಸ್ನೇಕ್ ಕೆಂಪರಾಜು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮೈಸೂರಿನಲ್ಲಿ ಬನ್ನಿಮಂಟಪ ಬಳಿ ನಾಗರಹಾವಿನ ಮರಿ ರಸ್ತೆದಾಟುವಾಗ ವಾಹನ ಹರಿದು ಗಾಯಗೊಂಡಿತ್ತು. ವಾಹನ ಹರಿದ ಪರಿಣಾಮ ಹಾವಿನ ಮರಿಯ ಬೆನ್ನು ಮೂಳೆಗೆ ಗಾಯವಾಗಿತ್ತು. ಚಲಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಹಾವಿನ ಮರಿಯನ್ನ ಕೆಂಪರಾಜು ರಕ್ಷಣೆ ಮಾಡಿ ಚಿಕಿತ್ಸೆ ನೀಡಿದ್ದಾರೆ. ಪಶು ವೈದ್ಯರ ಮಾರ್ಗದರ್ಶನದೊಂದಿಗೆ ಸ್ನೇಕ್ ಕೆಂಪರಾಜು ಹಾವಿನ ಮರಿಗೆ ಬ್ಯಾಂಡೇಜ್ ಕಟ್ಟಿ ಔಷಧಿ ಹಾಕಿದ್ದಾರೆ. ಈ ಮೂಲಕ ಕೆಂಪರಾಜು ಮಾನವೀಯತೆ ಮೆರೆದಿದ್ದಾರೆ. ಸ್ನೇಕ್ ಕೆಂಪರಾಜು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಹಾವಿನ ಮರಿಯನ್ನ ರಕ್ಷಿಸಿದ್ದಾರೆ. : . .