ವರುಣನ ಕೃಪೆಗೆ ನಳನಳಿಸುತ್ತಿದೆ ’ .. ಮೈಸೂರು, ಜೂ.08, 2019 : (.. ) : ನಗರದ ಅತ್ಯಂತ ಪುರಾತನ ಮರವೆಂದೇ ಹೆಸರು ಪಡೆದಿರುವ ‘ ದೊಡ್ಡಾಲದಮರ ‘ ಇದೀಗ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ಇದಕ್ಕೆ ಕಾರಣ ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ. ಮೈಸೂರು-ತಿ.ನರಸೀಪುರ ರಸ್ತೆ ಮೂಲಕ ಸಾಗಿದರೆ ರಸ್ತೆ ಬದಿಯಲ್ಲೇ ಆಕರ್ಷಕವಾದ ಈ ದೊಡ್ಡಾಲದ ಮರ ಕಾಣಿಸುತ್ತದೆ. ನಿಸರ್ಗವೇ ಛತ್ರಿಯನ್ನು ನಿರ್ಮಿಸಿದೆಯೇನೋ ಎಂಬಂತೆ ಭಾಸವಾಗುವಂತಿದೆ ಈ ಆಲದ ಮರ. ಬೆಂಗಳೂರಿನ ಕೆಂಗೇರಿ ಸಮೀಪದ ದೊಡ್ಡ ಆಲದ ಮರವನ್ನು ಹೊರತು ಪಡಿಸಿದರೆ ಇದೇ ಅತ್ಯಂತ ಎರಡನೇ ದೊಡ್ಡ ಆಲದ ಮರ. ಅಂದಾಜು ಒಂದುವರೆ ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ಮರ ಹರಡಿಕೊಂಡಿದೆ. ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಈ ಆಲದ ಮರ ಪಾರಂಪರಿ ಮರ ವೆಂದು ಗುರುತಿಸಲ್ಪಟ್ಟಿದೆ. ಈ ಮರದ ಬಳಿಯೇ ಅನೇಕ ಸಿನಿಮಾಗಳ ಚಿತ್ರೀಕರಣ ಸಹ ನಡೆದಿದೆ. ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಾಬಾ ಸಿನಿಮಾ, ಅಮೀರ್ ಖಾನ್ ನಟನೆಯ ರಾಜ ಹಿಂದೂಸ್ತಾನಿ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ಸಿನಿಮಾಗಳು ಇಲ್ಲಿ ಶೂಟಿಂಗ್ ನಡೆಸಿವೆ. ಪರಿಣಾಮ ಈ ಮರದ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳಗೊಂಡಿತು. ಬಾಹ್ಯ ಬೇರುಗಳನ್ನು ಕಿತ್ತು ಹಾಕುತ್ತಿದ್ದ ಕಾರಣ ಒಂದು ರೀತಿಯಲ್ಲಿ ಇದು ಮರಕ್ಕೂ ಮುಳುವಾಗಿತ್ತು. ಆದರೆ ಇದೀಗ ವರುಣನ ಕೃಪೆಯಿಂದ ದೊಡ್ಡಾಲದ ಮರ ಮತ್ತೆ ನಳನಳಿಸುತ್ತಿದೆ. ‘ ಹಸಿರು ಛತ್ರಿ ‘ ಕೈ ಬಿಸಿ ಬಾ ಅತಿಥಿ ಎಂದು ಕರೆಯುತ್ತಿದೆ. ಚಿತ್ರ ಕೃಪೆ : ಪಿ.ಜೆ.ರಾಘವೇಂದ್ರ, ಮೈಸೂರು —— , ‘’ ( ) . . ’ . , . , . 30 , .