ಬೆಂಗಳೂರಿನಲ್ಲಿ ಪ್ರೇಮಿಗಳಿಬ್ಬರ ಅಪಾಯಕಾರಿ ಬೈಕ್ ವ್ಹೀಲಿಂಗ್: ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ವೈರಲ್ ವಿಡಿಯೋ ಬೆಂಗಳೂರು:ಜೂ-7: ಯುವಕರಲ್ಲಿ ಹೆಚ್ಚುತ್ತಿರುವ ಬೈಕ್ ವ್ಹೀಲಿಂಗ್ ಕ್ರೇಜ್ ಬಗ್ಗೆ ಪೊಲೀಸರು ಅದೆಷ್ಟೇ ಎಚ್ಚರಿಕೆ ನೀಡಿದರೂ ಯುವಜನತೆ ಮಾತ್ರ ಅದರಿಂದ ಹೊರಬರುತ್ತಿಲ್ಲ. ಅಪಾಯಕಾರಿ ಬೈಕ್ ವ್ಹೀಲಿಂಗ್ ಕುರಿತ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೈಕ್ ನಲ್ಲಿ ಕುಳಿತ ಯುವಕನಿಗೆ ಹಿಂಬದಿಯಲ್ಲಿ ಕುಳಿತಿರುವ ಯುವತಿಯೇ ವ್ಹೀಲಿಂಗ್‌​ ಮಾಡುವಂತೆ ಹುರಿದುಂಬಿಸುತ್ತಿರುವ ಹಾಗೂ ನಡುರಸ್ತೆಯಲ್ಲಿ ಯುವತಿಯ ಜತೆ ಅಪಾಯಕಾರಿಯಾಗಿ ಯುವಕ ವ್ಹೀಲಿಂಗ್ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾನಗಲ್ಲಿ ಭಾರೀ ವೈರಲ್ ಆಗಿದೆ. ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪ್ರೇಯಸಿಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ಯುವಕನೊಬ್ಬ ಅಪಾಯಕಾರಿ ವ್ಹೀಲಿಂಗ್‌ ಮಾಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದಾಳೆ. ವೈರಲ್​ ಆಗಿರುವ ವಿಡಿಯೋದಲ್ಲಿರುವಂತೆ ಯುವಕ ಡಿಯೋ ಸ್ಕೂಟರ್​ ಸವಾರಿ ಮಾಡುತ್ತಿರುತ್ತಾನೆ. ವ್ಹೀಲಿಂಗ್‌​ ಮಾಡಿದಲ್ಲದೇ ಒಂದೇ ಕಾಲಿನಲ್ಲಿ ಸೀಟ್​ ಮೇಲೆ ನಿಂತು ಸವಾರಿ ಮಾಡುವ ಸಾಹಸವನ್ನೂ ಪ್ರದರ್ಶಿಸಿದ್ದಾನೆ. ಅಷ್ಟೇ ಅಲ್ಲ ಹಿಂಬದಿ ಕುಳಿತಿದ್ದ ಯುವತಿ ತನ್ನ ಒಂದು ಕೈನಲ್ಲಿ ಯುವಕನ ಕಾಲನ್ನು ಹಿಡಿದು ವ್ಹೀಲಿಂಗ್‌​ ಮಾಡುವಂತೆ ಯುವಕನನ್ನು ಪ್ರೋತ್ಸಾಹಿಸಿದ್ದಾಳೆ. ಪ್ರೇಮಿಗಳಿಬ್ಬರ ವ್ಹೀಲಿಂಗ್‌​ ಕ್ಷಣವನ್ನು ಹಿಂಬದಿ ಬರುತ್ತಿದ್ದವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಜಾಲತಾಣಗಲ್ಲಿ ವೈರಲ್ ಆಗಿರುವ ಈ ಅಪಾಯಕಾರಿ ಬೈಕ್ ವ್ಹೀಲಿಂಗ್ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ,, ,