ಮಾಜಿ ಶಾಸಕ ಎಂ. ಸತ್ಯನಾರಾಯಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸಿಎಂ ಸಿದ್ದರಾಮಯ್ಯ… ಮೈಸೂರು,ಜೂ 7,2019(..): ಮಾಜಿ ಶಾಸಕ ಎಂ ಸತ್ಯನಾರಾಯಣ ನಿಧನ ಮೈಸೂರಿನಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಸತ್ಯ ನಾರಾಯಣ ಏಕಕಾಲಕ್ಕೆ ರಾಜಕೀಯ ಜೀವನ ಆರಂಭಿಸಿದವರು. 1977 ರಲ್ಲಿ ಇಬ್ಬರು ತಾಲೂಕು ಅಭಿವೃದ್ಧಿ ಮಂಡಳಿ ಚುನಾವಣೆಗೆ ನಿಂತಿದ್ದವು. ಜನತಾ ಪಕ್ಷದಿಂದ ಇಬ್ಬರೂ ಗೆಲುವು ಸಾಧಿಸಿದ್ದೆವು. ನನಗೆ ಸತ್ಯನಾರಾಯಣ ಅತ್ಯಂತ ಆಪ್ತ ಸ್ನೇಹಿತ. ಸರಳ ಸಜ್ಜನಿಕೆಯ ರಾಜಕಾರಣಿ ಎಂದರು. 2008ರಲ್ಲಿ ನಾನು ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಆಗ ನಾನೇ ‘ಸತ್ಯ ನೀನು ಚಾಮುಂಡೇಶ್ವರಿಯಲ್ಲಿ ನಿಂತುಕೋ’ ಅಂತ ಕಾಲ್ ಮಾಡಿ ಹೇಳಿದ್ದೆ. ಚುನಾವಣೆಗೆ ನಿಲ್ತೀನಿ ಅಂತ ಸತ್ಯಪ್ಪ ಅಂದುಕೊಂಡೇ ಇರಲಿಲ್ಲ. ಅವನಿಗೆ ನಾನೇ ಟಿಕೆಟ್ ಕೊಡಿಸಿದ್ದೆ. ಗೆದ್ದು ಎಂಎಲ್‌ಎ ಕೂಡ ಆಗಿದ್ದರು. ಅವರು ಪಕ್ಷದಲ್ಲಿ ನಿಷ್ಠೆಯಿಂದ ಇದ್ದವರು. ವೈಯಕ್ತಿಕವಾಗಿ ಅವರು ನನಗೆ ಆಪ್ತ ಸ್ನೇಹಿತ. ಅವರ ಸಾವು ಸಾರ್ವಜನಿಕ ಜೀವನಕ್ಕೆ ನಷ್ಟವಾಗಿದೆ ಎಂದು ಕಂಬನಿ ಮಿಡಿದರು. : . # # # # #