ಇನ್ನೆರೆಡು ಮೂರು ದಿನಗಳಲ್ಲಿ ಹೆಚ್,ವಿಶ್ವನಾಥ್ ಅವರಿಂದ ರಾಜೀನಾಮೆ ವಾಪಸ್- ಸಂಸದ ಪ್ರಜ್ವಲ್ ರೇವಣ್ಣ… ಹಾಸನ,ಜೂ,6,2019(..): ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ಅವರನ್ನ ಮನವೊಲಿಸಲು ಹೆಚ್.ಡಿ ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್ ನಾಯಕರು ಯತ್ನಿಸುತ್ತಿದ್ದು, ಈ ನಡುವೆ ಇನ್ನೆರೆಡು ಮೂರು ದಿನಗಳಲ್ಲಿ ಹೆಚ್.ವಿಶ್ವನಾಥ್ ಅವರು ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಹಾಸನದಲ್ಲಿ ಇಂದು ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಹೆಚ್.ವಿಶ್ವನಾಥ್ ಅವರು ಕೆಲ ವಿಚಾರಗಳಿಗೆ ಬೇಸರಗೊಂಡಿದ್ದಾರೆ. ನಿನ್ನೆ ನಡೆದ ಜೆಡಿಎಲ್ ಪಿ ಸಭೆಯಲ್ಲಿ ಅವರು ಭಾಗಿಯಾಗಿದ್ದರು. ಹಿರಿಯರಾದ ಎಚ್.ಡಿ.ದೇವೇಗೌಡರು, ಸಿಎಂ ಕುಮಾರಸ್ವಾಮಿ ಅವರು ಜೆಡಿಎಲ್ ಪಿ ಸಭೆಯಲ್ಲಿ ವಿಶ್ವನಾಥ್ ಅವರ ಮನವೊಲಿಸಿದ್ದಾರೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ಎಂದರು. ಹಾಗೆಯೇ ವಿಶ್ವನಾಥ್ ಅವರು ಹಿರಿಯರು ಅವರ ಮಾರ್ಗದರ್ಶನದಲ್ಲಿಯೇ ನಾವು ಪಕ್ಷವನ್ನು ಕಟ್ಟುತ್ತೇವೆ. ಕೆಲವೊಂದು ವಿಚಾರದಲ್ಲಿ ಅವರ ಮನಸ್ಸಿಗೆ ಬೇಸರವಾಗಿದೆ ಎಂದು ಪ್ರಜ್ವಲ್ ಹೇಳಿದರು. ಹಾಸನ ಸಂಸದ ಸ್ಥಾನಕ್ಕೆ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ನನ್ನ ರಾಜೀನಾಮೆ ಬಗ್ಗೆ ಹಿರಿಯರ ಮುಂದಿಟ್ಟಿದ್ದೇನೆ. ನನ್ನ ರಾಜೀನಾಮೆ ನಿರ್ಧಾರಕ್ಕೆ ನಾನು ಈಗಲೂ ಬದ್ಧ ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. : . - # # # # #