ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ: ಔಷಧಿ ಗಿಡ ನೆಟ್ಟು ಸಾಮಾಜಿಕ ಕಳಕಳಿ ಮೆರೆದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು,ಜೂ,6,2019(..): ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸೌಧದ ಆವರಣದಲ್ಲಿ ಔಷಧೀಯ ಗಿಡವನ್ನ ನೆಟ್ಟು ಸಾಮಾಜಿಕ ಕಳಕಳಿ ಮೆರೆದರು. ನಿನ್ನೆ ವಿಶ್ವಪರಿಸರ ದಿನ ಆಚರಣೆ ಮಾಡಲಾಯಿತು. ಈ ಹಿನ್ನೆಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸೌಧದ ಆವರಣದಲ್ಲಿ ಕ್ಯಾನ್ಸರ್ ರೋಗ ನಿರೋಧಕ ಅಂಶವುಳ್ಳ ಗಿಡ ನೆಟ್ಟು ಸಾಮಾಜಿಕ ಕಳಕಳಿ ಮೆರೆದರು. ಗಿಡ ನೆಟ್ಟ ಬಳಿಕ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇದು ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿಯಾಗಿದೆ. ಈ ಮರದಲ್ಲಿನ ತೊಗಟೆ ಮತ್ತು ಬೀಜ ಕ್ಯಾನ್ಸರ್ ನಿರೋಧಕ ಶಕ್ತಿಹೊಂದಿದೆ. ಈ ರೀತಿಯ ಸಸಿಗಳನ್ನ ಬೆಳೆಯಬೇಕು ಎಂದು ರೈತರಿಗೆ ಮನವಿ ಮಾಡ್ತೀನಿ. ಕ್ಯಾನ್ಸರ್ ನಿರೋಧಕ ಜೊತೆಗೆ ಕೈಗಾರಿಕಾ ಉತ್ಪನ್ನಕ್ಕೆ ಬೇಕಾಗಿರುವ ಅಂಶಗಳನ್ನ ಹೊಂದಿದೆ. ಇದರ ಸದ್ಬಾಳಕೆಯನ್ನ ನಾಡಿನ ರೈತರು ಬಳಸಿಕೊಳ್ಳಬೇಕು ಕಿವಿಮಾತು ಹೇಳಿದರು. : - , . # # # #