‘ಮಾಲ್ಗುಡಿ ಡೇಸ್’ಗಾಗಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದಾರೆ ವಿಜಯ್ ರಾಘವೇಂದ್ರ ಬೆಂಗಳೂರು, ಜೂನ್ 06, 2019 (..):ವಿಜಯ ರಾಘವೇಂದ್ರ ಮೊದಲ ಬಾರಿಗೆ ಸಿಕ್ಸ್‌ಪ್ಯಾಕ್‌ ಮಾಡಲು ಮುಂದಾಗಿದ್ದಾರೆ. 22 ಕೆಜಿ ತೂಕ ಇಳಿಸುವ ಸಾಹಸಕ್ಕೆ ಕೈ ಹಾಕಿದ್ದು, ನಿತ್ಯವೂ ಈಗ ಜಿಮ್‌ನಲ್ಲಿ ಎರಡು ತಾಸು ವರ್ಕೌಟ್‌ ಮಾಡುತ್ತಿದ್ದಾರೆ. ಈಗಾಗಲೇ 8 ಕೆಜಿ ತೂಕ ಇಳಿಸಿದ್ದಾರೆ. ಮಾಲ್ಗುಡಿ ಡೇಸ್‌’ ಸಿನಿಮಾಗಾಗಿ ದಿನಕ್ಕೆರಡು ಬಾರಿ ವರ್ಕೌಟ್‌ ಮಾಡಿ ದೇಹ ಹುರಿಗೊಳಿಸುತ್ತಿದ್ದಾರೆ. ಅಂದಹಾಗೆ ಕಿಶೋರ್‌ ಮೂಡಬಿದ್ರೆ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ಹೆಸರಿನ ಚಿತ್ರಕ್ಕೆ ವಿಜಯ್‌ ರಾಘವೇಂದ್ರ ನಾಯಕ. ಅದರ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇನ್ನೇನು ಎರಡನೇ ಹಂತದ ಚಿತ್ರೀಕರಣ ಆರಂಭವಾಗಬೇಕಿದೆ.