ತಾಕತ್ ಇದ್ರೆ ಡಾ.ಜಿ. ಪರಮೇಶ್ವರ್ ಸಿಎಂ ಮಾಡಿ- ಸಿದ್ದರಾಮಯ್ಯ ಟ್ವೀಟ್ ಗೆ ಬಿಎಸ್ ವೈ ಸವಾಲು… ಬೆಂಗಳೂರು,ಜೂ,5,2019(..): ರಾಜ್ಯದ ಎಲ್ಲಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೂ ಒಬ್ಬ ದಲಿತ ಸಂಸದನಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಲಿಲ್ಲ ಎಂದು ಟ್ವಿಟ್ಟರ್ ನಲ್ಲಿ ಟೀಕಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಎಸ್ ಸಿ ಸಂಸದರಿಗೆ ಸಚಿವ ಸ್ಥಾನ ದ ಬಗ್ಗೆ ನೀವು ಚಿಂತೆ ಮಾಡುವುದು ಬೇಕಾಗಿಲ್ಲ. ನಿಮಗೆ ತಾಕತ್ತಿದ್ದರೇ ಡಾ.ಜಿ. ಪರಮೇಶ್ವರ್ ಅವರನ್ನ ಸಿಎಂ ಮಾಡಿ ಎಂದು ಸಿದ್ದರಾಮಯ್ಯಗೆ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಎಸ್.ಸಿ ಸಂಸದರಿಗೆ ಸಚಿವ ಸ್ಥಾನ ಕೊಡಿಸುವುದು ನಮ್ಮ ಜವಾಬ್ದಾರಿ. ಬಿಜೆಪಿ ಎಸ್ ಸಿ ಸಂಸದರ ಮಂತ್ರಿಗಿರಿ ಬಗ್ಗೆ ನಿಮಗೆ ಚಿಂತೆ ಬೇಡ. ನೀವು ಮೊದಲು ಪರಮೇಶ್ವರ್ ರನ್ನ ಸಿಎಂ ಮಾಡಿ ಎಂದು ಟಾಂಗ್ ಕೊಟ್ಟರು. ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಬಗ್ಗೆ ಟೀಕಿಸಿದ ಬಿಎಸ್ ಯಡಿಯೂರಪ್ಪ, ಫೈವ್‌ ಸ್ಟಾರ್‌ ಹೊಟೇಲ್‌ನಲ್ಲಿ ವಾಸ್ತವ್ಯ ಮಾಡುವ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಶಾಲೆಯಲ್ಲಿ ವಾಸ್ತವ್ಯ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ಕಡೆ ಉದ್ದಾರ ಆಗಿದೇಯಾ..? ಆ ಗ್ರಾಮಗಳ ಅಭಿವೃದ್ಧಿಗೆ ಹಣ ಕೊಡುವುದಾಗಿ ಬುರುಡೆ ಬಿಟ್ಟಿದ್ದರಲ್ಲ. ಹಣ ಬಿಡುಗಡೆ ಮಾಡಿದ್ದಾರಾ.. ಎಂದು ಪ್ರಶ್ನಿಸಿದರು. . # # # # #