ಕನ್ವರ್ ನಹೀ ಕನ್ವರ್ ಲಾಲ್ ಬೋಲೋ…. ಮತ್ತೆ ತೆರೆ ಮೇಲೆ ಬರಲಿದೆ ಅಂತ ಬೆಂಗಳೂರು, ಜೂನ್ 06, 2019 (..): 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂತ ಮತ್ತೆ ದೊಡ್ಡ ಪರದೆ ಮೇಲೆ ಬರಲು ಸಿದ್ಧವಾಗಿದೆ. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದರು. ರೆಬೆಲ್‍ಸ್ಟಾರ್ ಅಂಬರೀಶ್ ನಾಯಕರಾಗಿ ನಟಿಸಿದ್ದ ಈ ಚಿತ್ರ ಕಲಾ ರಸಿಕರ ಮನಸೂರೆಗೊಂಡಿತ್ತು. ಅಂತ ಈ ವಾರ (ಜೂನ್ 7)ರಂದು ಅಂತ ಮತ್ತೆ ತೆರೆಗೆ ಬರಲಿದೆ. ಡಿಜಿಟಲ್ ಫಾರ್ಮಾಟ್‍ನಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.