ಕೆ.ಆರ್.ಎಸ್ ಗೆ ಕೇಂದ್ರದ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ, ಪರಿಶೀಲನೆ…. ಮಂಡ್ಯ,ಜೂ,4,2019(..): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕೆ.ಆರ್.ಎಸ್ ಗೆ ಕೇಂದ್ರದ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡದ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಎಸ್. ಜಲಾಶಯದಲ್ಲಿ ಪ್ರಾಧಿಕಾರ ತಂಡದ ಸದಸ್ಯರು ಜಲಾಶಯ ಪರಿಶೀಲನೆ ನಡೆಸಿದ್ದು, ಈ ವೇಳೆ ಸ್ಥಳೀಯ ಅಧಿಕಾರಿಗಳು ಪ್ರಸ್ತುತ ನೀರಿನ ಮಟ್ಟ , ಪ್ರಸಕ್ತ ವಾಸ್ತವ ಸ್ಥಿತಿಗಳ ಬಗ್ಗೆ ಪ್ರಾಧಿಕಾರ ತಂಡದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡ ಇಂದು ಮತ್ತು ನಾಳೆ ಕೆ.ಆರ್.ಎಸ್.ಜಲಾಶಯದ ಸ್ಥಿತಿಗತಿಗಳ ಕುರಿತು ಅಧ್ಯಯನ ಮಾಡಲಿದ್ದು, ನಾಳಿದ್ದು ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿಗೂ ಭೇಟಿ ನೀಡಲಿದೆ. ಭೇಟಿ ಬಳಿಕ ಪ್ರಾಧಿಕಾರದ ಸದಸ್ಯರು ಕೇಂದ್ರಕ್ಕೆ ವರದಿ ನೀಡಲಿದ್ದಾರೆ. ಕಾವೇರಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲು ಸೂಚಿಸಿದ ಬೆನ್ನಲ್ಲೆ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡದ ಸದಸ್ಯರ ಭೇಟಿ ಕುತೂಹಲ ಮೂಡಿಸಿದೆ : # # # # #