ಮದುವೆಯಲ್ಲಿ ನಂಬಿಕೆ ಇಲ್ಲ, ಸಂಗಾತಿ ಬಗ್ಗೆ ಮಾತ್ರ ನಂಬಿಕೆ ಎಂದ ಸಲ್ಮಾನ್ ಬೆಂಗಳೂರು, ಜೂನ್ 4, 2019 (..): ಮದುವೆ ಯಾವಾಗ ಎಂಬ ಪ್ರಶ್ನೆಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಉತ್ತರ ನೀಡಿದ್ದಾರೆ. ಕೆಲವು ವರ್ಷಗಳಿಂದಲೂ ಕೇಳಿಬರುತ್ತಿರುವ ಪ್ರಶ್ನೆಯೆಂದರೆ ಸಲ್ಮಾನ್ ಖಾನ್ ಮದುವೆ ಯಾವಾಗ? ಇತ್ತೀಚೆಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮದುವೆಯಲ್ಲಿ ನನಗೆ ನಂಬಿಕೆಯೇ ಇಲ್ಲ. ಅದೀಗ ನಶಿಸಿಹೋಗುತ್ತಿರುವ ಒಂದು ವ್ಯವಸ್ಥೆ. ಆದರೆ ಸಂಗಾತಿ ಎನ್ನುವುದರಲ್ಲಿ ನನಗೆ ನಂಬಿಕೆಯಿದೆ ಎಂದಿದ್ದಾರೆ.