ಪ್ರಿಯಾಂಕ ಉಪೇಂದ್ರ ‘ದೇವಕಿ’ ಬಿಡುಗಡೆಗೆ ಸಿದ್ಧ ! ಬೆಂಗಳೂರು, ಜೂನ್ 4, 2019 (..): ಪ್ರಿಯಾಂಕ ಉಪೇಂದ್ರ ನಟನೆಯ ‘ದೇವಕಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ದೇವಕಿ’ ಸಿನಿಮಾಗೆ ಸೆನ್ಸಾರ್ ಮಂಡಳಿ ಯು ಎ ಪ್ರಮಾಣ ಪತ್ರ ನೀಡಿದೆ. ಚಿತ್ರವನ್ನು ನೋಡಿದ ಸೆನ್ಸಾರ್ ಅಧಿಕಾರಿಗಳು ಖುಷಿಯಾಗಿದ್ದಾರೆ. ಚಿತ್ರತಂಡಕ್ಕೆ ಇದು ಬಲ ನೀಡಿದೆ. ಚಿತ್ರ ತಂಡ ರಿಲೀಸ್ ಗೆ ಪ್ಲಾನ್ ಮಾಡುತ್ತಿದ್ದು, ಜೂನ್ ತಿಂಗಳ ಕೊನೆಯ ವಾರ ಅಥವಾ ಜುಲೈ ತಿಂಗಳ ಮೊದಲ ವಾರ ಚಿತ್ರ ಬಿಡುಗಡೆಯಾಗಲಿದೆ.